ತಮ್ಮ ಮದುವೆಗೆ ಆಪ್ತ ಮಿತ್ರ ಗೈರಾಗಿದ್ದಕ್ಕೆ ಬೇಸರಗೊಂಡ ನಟ ರಾಣಾ ದಗ್ಗು ಬಾಟಿ

ಶುಕ್ರವಾರ, 7 ಆಗಸ್ಟ್ 2020 (11:15 IST)
ಹೈದರಾಬಾದ್ : ನಟ ರಾಣಾ ದಗ್ಗು ಬಾಟಿ – ಮಿಹಿಕಾ ಬಜಾಜ್ ಮದುವೆಗೆ ಸಕಲ ತಯಾರಿ ನಡೆಯುತ್ತಿದ್ದು, ಆದರೆ ತಮ್ಮ ಮದುವೆಗೆ ತಮ್ಮ ಆಪ್ತರೊಬ್ಬರಿಗೆ ಬರಲಾಗದ ಕಾರಣ  ನಟ ರಾಣಾ ದಗ್ಗು ಬಾಟಿ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಆಗಸ್ಟ್ 8ರಂದು ನಟ ರಾಣಾ ದಗ್ಗು ಬಾಟಿ – ಮಿಹಿಕಾ ಬಜಾಜ್ ಮದುವೆಗೆ ಕಾರ್ಯಕ್ರಮ ನಡೆಯಲಿದೆ. ಅವರ ಕುಟುಂಬದ ರಾಮಾನಾಯ್ಡು ಸ್ಟುಡಿಯೋದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ ಭೀತಿ ಹಿನ್ನಲೆಯಲ್ಲಿ ಮದುವೆ ಕೆಲವೇ ಆಪ್ತರನ್ನು ಆಹ್ವಾನಿಸಲಾಗಿದೆ.

ಆದರೆ ನಟ ನಟ ರಾಣಾ ದಗ್ಗು ಬಾಟಿ ತಮ್ಮ ಮದುವೆ ಆಪ್ತ ಮಿತ್ರ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರನ್ನು ಆಹ್ವಾನಿಸಲಾಗಿದೆ. ಆದರೆ ಅವರಿಗೆ ಕೊರೊನಾ ಸೋಂಕು ತಗುಲಿದ ಹಿನ್ನಲೆಯಲ್ಲಿ ಮದುವೆಗೆ ಗೈರಾಗಲಿದ್ದಾರೆ ಎನ್ನಲಾಗಿದೆ. ಇದರಿಂದ ನಟ ನಟ ರಾಣಾ ದಗ್ಗು ಬಾಟಿಗೆ ಬೇಸರವಾಗಿದೆಯಂತೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ