ಯಾರೇ ತೀರಿಕೊಂಡರೂ ಹಿರಿಯಣ್ಣನಂತೆ ಹೆಗಲುಕೊಡುತ್ತಿದ್ದ ಶಿವರಾಂ
ಶಿವರಾಮಣ್ಣ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅವರು ತಮ್ಮ ಹೆಸರಿಗೆ ತಕ್ಕಂತೇ ಬದುಕಿದ್ದರು. ಪರೋಪಕಾರ್ಥಮಿದಂ ಶರೀರಂ ಎಂಬಂತೇ ಜೀವನದುದ್ದಕ್ಕೂ ಸ್ನೇಹ ಜೀವಿಯಾಗಿ, ಇತರರಿಗೆ ಸಹಾಯ ಮಾಡುತ್ತಲೇ ಬದುಕಿದರು.
ಕನ್ನಡ ಚಿತ್ರರಂಗದಲ್ಲಿ ಯಾರೇ ಸಾವನ್ನಪ್ಪಿದ್ದರೂ ಅವರ ದುಃಖದಲ್ಲಿ ಭಾಗಿಯಾಗುತ್ತಿದ್ದರು. ಅವರಿಗೆ ಅಂತಿಮ ಸಂಸ್ಕಾರ ನಡೆಯುವವರೆಗೂ ಹೆಗಲುಕೊಡುತ್ತಿದ್ದರು. ಅಂತಹ ಸಜ್ಜನ, ಸರಳ ವ್ಯಕ್ತಿತ್ವದ ಶಿವರಾಂರನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ನಿಜಕ್ಕೂ ನಷ್ಟವಾಗಿದೆ.