ಮುಂಬೈ: 50ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಬಾಲಿವುಡ್ ಕಿಂಗ್ ಖಾನ್ ಶಾರುಖ್ಗೆ ಜೀವಬೆದರಿಕೆ ಕರೆ ಬಂದಿರುವ ಬಗ್ಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ ಪೊಲೀಸರು ಬಾಂದ್ರಾ ಪೊಲೀಸ್ ಠಾಣೆಗೆ ಕರೆ ಮಾಡಿದ ಆರೋಪಿ, ₹50ಲಕ್ಷ ಬೇಡಿಕೆಯಿಟ್ಟಿದ್ದಾನೆ. ಇಲ್ಲದಿದ್ದರೆ ನಟ ಶಾರುಖ್ ಖಾನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ.
ಮುಂಬೈ ಪೊಲೀಸ್ ತಂಡವು ಛತ್ತೀಸ್ಗಢದ ರಾಯ್ಪುರಕ್ಕೆ ಕರೆಯನ್ನು ಪತ್ತೆಹಚ್ಚಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸರ ತಂಡಗಳು ಛತ್ತೀಸ್ಗಢಕ್ಕೆ ತೆರಳಿದ್ದು, ತನಿಖೆ ಮುಂದುವರಿದಿದೆ.
ನವೆಂಬರ್ 5 ರಂದು ಮುಂಬೈ ಪೊಲೀಸರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ನಟ ಸಲ್ಮಾನ್ ಖಾನ್ ವಿರುದ್ಧ ಬೆದರಿಕೆ ಸಂದೇಶ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆ ಸಂದೇಶವು ನಟನಿಗೆ ಎರಡು ಆಯ್ಕೆಗಳನ್ನು ನೀಡಿತು ಕ್ಷಮೆಯಾಚಿಸಿ ಅಥವಾ ಬದುಕಲು 5 ಕೋಟಿ ನೀಡಿ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು.
ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಮ್ಗೆ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಬಂದಿದೆ.