ನಟ ಸುಶಾಂತ ಸಿಂಗ್ ರಜಪೂತ್ – ನಟಿ ಸಾರಾ ಅಲಿಖಾನ್ ಬ್ರೇಕ್ ಅಪ್ ಹೇಗಾಯ್ತು?
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ನಟಿ ಸಾರಾ ಅಲಿಖಾನ್ ಜೊತೆಗೆ ಡೇಟಿಂಗ್ ನಡೆಸುತ್ತಿರುವುದನ್ನು ಗೌಪ್ಯವಾಗಿ ಇಟ್ಟಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ.
ನಟನ ಸಾವಿನ ಪ್ರಕರಣದಲ್ಲಿ ಸಿಬಿಐ ವಿಚಾರಣೆ ನಡೆಸಿದ ಸುಶಾಂತ್ ಸಿಂಗ್ ರಜಪೂತ್ ಅವರ ಚಾಲಕ ಧೀರೇಂದ್ರ ಯಾದವ್, ದಿವಂಗತ ನಟ ಸುಶಾಂತ ಸಿಂಗ್ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಸಂಬಂಧದಲ್ಲಿದ್ದರು ಎಂಬುದನ್ನು ಖಚಿತಪಡಿಸಿದ್ದಾರೆ ಎನ್ನಲಾಗಿದೆ.
ಥೈಲ್ಯಾಂಡ್ ಪ್ರವಾಸದಿಂದ ಹಿಂದಿರುಗಿದ ನಂತರ ಸಾರಾ ಮತ್ತು ಸುಶಾಂತ್ ಸಂಪರ್ಕದಲ್ಲಿಲ್ಲ ಎಂದು ಸುಶಾಂತ್ ಅವರ ಚಾಲಕ ಈಗ ಹೇಳಿದ್ದಾರೆ. ಅವರಿಬ್ಬರು ಪ್ರವಾಸದಲ್ಲಿದ್ದಾಗ ರಜೆಯಲ್ಲಿದ್ದರು ಮತ್ತು ಅವರು ಹಿಂದಿರುಗಿದ ಸ್ವಲ್ಪ ಸಮಯದ ನಂತರ ಮತ್ತೆ ಸೇರಿಕೊಂಡರು ಎಂದಿದ್ದಾರೆ.