ನಟ ಸುಶಾಂತ್ ಸಿಂಗ್ ಕೇಸ್ : ಆತ್ಮಹತ್ಯೆಗೆ ಯತ್ನಿಸಿದ ರಿಯಾ ಚಕ್ರವರ್ತಿ?
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್ ತನಿಖೆಯಲ್ಲಿ ದಿನಕ್ಕೊಂದು ಸುದ್ದಿಗಳು ಹೊರಬೀಳುತ್ತಿವೆ.
ಕುಟುಂಬದ ಘನತೆಗೆ ಕಳಂಕ ಬರುತ್ತಿರುವುದರಿಂದ ತಮ್ಮ ಜೀವನವನ್ನು ಅನೇಕ ಬಾರಿ ಕೊನೆಗೊಳಿಸುವ ಬಗ್ಗೆ ಯೋಚಿಸಿದ್ದಾರಂತೆ.
ಹೀಗಂತ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಯಾ ಹೇಳಿಕೊಂಡಿದ್ದಾರೆ.
ಸಂದರ್ಶನದಲ್ಲಿ, ರಿಯಾ ತನ್ನ ತಾಯಿಯೂ ಸಹ ಆತಂಕದಿಂದ ಬಳಲುತ್ತಿದ್ದಾಳೆ ಮತ್ತು ಆಸ್ಪತ್ರೆಗೆ ದಾಖಲಾಗಲಿದ್ದಾಳೆ ಎಂದು ಅನೇಕ ಬಾರಿ ಉಲ್ಲೇಖಿಸಿದ್ದಾಳೆ.
ನಾನು ಕಳೆದ ಎರಡು ತಿಂಗಳುಗಳಲ್ಲಿ ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದೇನೆ. ನನ್ನ ಕುಟುಂಬ ಮತ್ತು ನಾನು ಇದರ ಬಗ್ಗೆ ಯೋಚಿಸುತ್ತಿದ್ದೆವು ಎಂದೆಲ್ಲ ಮಾತನಾಡಿದ್ದಾರೆ.