ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಯಾಲಿಟಿ ಶೋದಲ್ಲಿ ಚಿತ್ರನಟರು ಪಾಲ್ಗೊಳ್ಳುವುದನ್ನು ವಿರೋಧಿಸಿ ನಿರ್ಮಾಪಕರು ಮಾಡುತ್ತಿರುವ ಹೋರಾಟಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು ಒಬ್ಬ ನಟನಾಗಿ ನಾನು ರಿಯಾಲಿಟಿ ಶೋ ಮಾಡಿದ್ದೇನೆ. ರಿಯಾಲಿಟಿ ಶೋನಲ್ಲಿ ನಟರು ಭಾಗಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಂದೇಶ ರವಾನಿಸಿದ್ದಾರೆ.
ನಾವು ರಿಯಾಲಿಟಿ ಶೋ ವಿರೋಧಿಯಲ್ಲ. ಆದರೆ, ರಿಯಾಲಿಟಿ ಶೋದಲ್ಲಿ ಚಿತ್ರ ಕಲಾವಿದರು ಭಾಗವಹಿಸುತ್ತಿರುವುದಕ್ಕೆ ನಮ್ಮ ವಿರೋಧ ಇದೆ. ರಾತ್ರಿ 9 ಗಂಟೆಗೆ ರಿಯಾಲಿಟಿ ಶೋ ನಡೆದರೆ ಸಂಜೆ 7.30 ಹಾಗೂ ರಾತ್ರಿ 9.30 ರ ಚಿತ್ರ ಪ್ರದರ್ಶನ ಹಾಳಾಗುತ್ತದೆ. ಇದರಿಂದ ನಿರ್ಮಾಪಕನಿಗೆ ನಷ್ಟವಾಗುತ್ತದೆ ಎಂದು ನಿರ್ಮಾಪಕರ ಸಂಘ ವಿರೋಧ ವ್ಯಕ್ತಪಡಿಸುತ್ತಿದೆ.