ಹೊಸ ಸುದ್ದಿಯೊಂದಿಗೆ ಬರಲಿದ್ದಾರೆ ನಟಿ ದೀಪಿಕಾ, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

Sampriya

ಸೋಮವಾರ, 2 ಸೆಪ್ಟಂಬರ್ 2024 (17:27 IST)
Photo Courtesy X
ಈಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ, ಬಿಗ್‌ಬಾಸ್ ಸ್ಪರ್ಧಿ ದೀಪಿಕಾ ದಾಸ್ ತಮ್ಮ ಅಭಿಮಾನಿಗಳಿಗೆ ಹೊಸ ಸುದ್ದಿಯನ್ನು ನೀಡಲು ಬರುತ್ತಿದ್ದಾರೆ.

ಈ ವಿಚಾರವನ್ನು ಅವರೇ ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ  ಹೇಳಿಕೊಂಡಿದ್ದಾರೆ. ಅನೌನ್ಸ್‌ಮೆಂಟ್‌, ಇಂದು 6ಗಂಟೆಗೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ಕಾಯುತ್ತಿದ್ದೇವೆ ದೀಪಿಕಾ ಎಂದು ಬರೆದುಕೊಂಡಿದ್ದಾರೆ.

ನಾಗಿನಿ ಸೀರಿಯಲ್ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ದೀಪಿಕಾ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇನ್ನೂ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ
ದೀಪಿಕಾ ಅವರ ಡ್ರೆಸ್ಸಿಂಗ್‌, ಸ್ಟೈಲ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದರು.

ಇದಾದ ಬಳಿಕ ಬಣ್ಣದ ಲೋಕದಿಂದ ದೂರ ಉಳಿದುಕೊಂಡಿದ್ದ ಅವರು ಈಚೆಗೆ ಗೆಳೆಯ, ಉದ್ಯಮಿ ದೀಪಕ್ ಅವರನ್ನು ಕೈಹಿಡಿದರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ದೀಪಿಕಾ ಅವರು ಆಗಾಗ ತಮ್ಮ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತಿರುತ್ತಾರೆ. ಈಚೆಗೆ ವರಮಹಾಲಕ್ಷ್ಮೀ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು.

ಸದ್ಯ ಇದೀಗ ಅಭಿಮಾನಿಗಳಲ್ಲಿ ಹೊಸ ಕುತೂಹಲವನ್ನು ಹುಟ್ಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ