ಗಂಡನ ಮೇಲಿನ ಪ್ರೀತಿ ಬಗ್ಗೆ ಹೇಳಿಕೊಂಡ ಸಿರಿ

Sampriya

ಮಂಗಳವಾರ, 9 ಜುಲೈ 2024 (18:04 IST)
Photo Courtesy X
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಛಾಪು ಮೂಡಿಸಿ, ಈಚೆಗೆ ಬಿಗ್‌ಬಾಸ್ ಮೂಲಕ ಮತ್ತೇ ಜನಮನ್ನಣೆ ಗಳಿಸಿದ ಸಿರಿ ಅವರು ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.   

ಜೂನ್ 13ರಂದು ಉದ್ಯಮಿ ಮತ್ತು ನಟ ಪ್ರಭಾಕರ್ ಬೋರೇಗೌಡ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ನಟಿ ಸಿರಿ ಅವರು ಪತಿ ಮೇಲಿನ ಪ್ರೀತಿ ಎಂಥದ್ದು ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪತಿ ಜತೆಗಿನ ಹಲವು ಪೋಟೋ ಹಂಚಿಕೊಂಡಿರುವ ಸಿರಿ ಅವರು, ಪ್ರೀತಿ ಏನೆಂದು ನನಗೆ ತಿಳಿದಿದ್ದರೆ ಅದಕ್ಕೆ ಕಾರಣ ನೀನು ಎಂದು ಬರೆದುಕೊಂಡಿದ್ದಾರೆ.  ಈ ಮೂಲಕ ಪತಿ ಮೇಲಿರುವ ಪ್ರೀತಿಯನ್ನು ಹೇಳಿಕೊಂಡಿದ್ದಾರೆ.

ತಂದೆಯಿಲ್ಲದ ಕಾರಣ ತಾಯಿಯನ್ನು ತಾನೇ ನೋಡಿಕೊಳ್ಳುತ್ತಿದ್ದ ಸಿರಿ ಅವರು ತನ್ನ ಕುಟುಂಬವನ್ನು ತನ್ನಂತ್ತೆ ಪ್ರೀತಿಸುವ ವ್ಯಕ್ತಿ ಸಿಕ್ಕರೆ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ. ಅದರಂತೆ ಪ್ರಭಾಕರ್ ಅವರ ಜತೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ