ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ಹೇಮಾ ಪಂಚಮುಖಿ

ಶನಿವಾರ, 8 ಸೆಪ್ಟಂಬರ್ 2018 (11:19 IST)
ಬೆಂಗಳೂರು : ‘ಅಮೆರಿಕಾ ಅಮೆರಿಕಾ’ ಚಿತ್ರದ ನಾಯಕಿ ನಟಿ ಹೇಮಾ ಪಂಚಮುಖಿ ಸೆಪ್ಟೆಂಬರ್ 6ರಂದು  ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.


‘ರಂಗೋಲಿ’ ಚಿತ್ರದ ನಟ ಪ್ರಶಾಂತ್ ಗೋಪಾಲ್ ಅವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದ ನಟಿ ಹೇಮಾ ಕೆಲವು ತಿಂಗಳ ಹಿಂದೆ ತಮ್ಮ ಮನೆಯವರ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸೀಮಂತ ಮಾಡಿಕೊಂಡಿದ್ದರು. ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದಾರೆ. ಇದೀಗ  ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.


ಈ ವಿಷಯವನ್ನು ಹೇಮಾ ಹಾಗೂ ಅವರ ಪತಿ ಪ್ರಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ಹೇಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ