ಬೆಡ್ ರೂಂನ ಈ ಬಣ್ಣಗಳು ನಿಮ್ಮ ಸೆಕ್ಸ್ ಲೈಫ್ ಮೇಲೆ ಪ್ರಭಾವ ಬೀರಲಿದೆಯಂತೆ!
ಶನಿವಾರ, 8 ಸೆಪ್ಟಂಬರ್ 2018 (07:11 IST)
ಬೆಂಗಳೂರು : ಬೆಡ್ ರೂಂನ ಬಣ್ಣಕ್ಕೂ ನಿಮ್ಮ ಲೈಂಗಿಕ ಜೀವನದ ಸುಖ-ದುಃಖಕ್ಕೂ ಸಂಬಂಧವಿದೆಯಂತೆ. ಇದನ್ನು ಸಾಮಾನ್ಯರು ಹೇಳಿರುವುದಲ್ಲ, ಈ ವಿಚಾರವನ್ನು ಅಧ್ಯಯನವೊಂದು ವರದಿ ಮಾಡಿದೆ. ಯಾವ ಬಣ್ಣ ಏನು ಸೂಚಿಸುತ್ತದೆ ನೋಡೋಣ.
*ನೀಲಿ : ನೀಲಿ ಬಣ್ಣ ಬೆಡ್ ರೂಂನಲ್ಲಿ ಒಂಥರಾ ಶಾಂತ ವಾತಾವರಣ ಒದಗಿಸುತ್ತದಂತೆ. ಹೀಗಾಗಿ ಈ ಬಣ್ಣದ ಬೆಡ್ ರೂಂ ಇದ್ದರೆ ದಂಪತಿಗಳ ಲೈಂಗಿಕ ಜೀವನ ಹದವಾಗಿರುತ್ತದೆ. ಹಾಗೆಯೇ ಇಂತಹ ಬಣ್ಣದ ಬೆಡ್ ರೂಂನಲ್ಲಿ ಸುಖ ನಿದ್ದೆಯೂ ಬರುವುದಂತೆ.
*ಹಳದಿ : ಹಳದಿ ಬಣ್ಣ ಹೆಚ್ಚಾಗಿರುವ ಬೆಡ್ ರೂಂನಲ್ಲಿ ಸುಖ ನಿದ್ದೆ ಗ್ಯಾರಂಟಿ. ಇಂತಹ ಬಣ್ಣದ ಬೆಡ್ ರೂಂನಲ್ಲಿ ದಂಪತಿ ರಿಲ್ಯಾಕ್ಸ್ ಆಗುವುದು ಹೆಚ್ಚಂತೆ.
*ಸಿಲ್ವರ್ : ಬೆಳ್ಳಿ ಪರದೆ, ಬೆಳ್ಳಿ ಬಣ್ಣ ಹುಣ್ಣಮೆಯನ್ನು ನೆನಪಿಸುವುದು. ಇದರಿಂದ ದಂಪತಿ ಬೇರೊಂದು ಮೂಡ್ ಗೆ ಹೋಗುವುದು ಸಹಜವಂತೆ
*ನೇರಳೆ : ನೇರಳೆ ಬಣ್ಣ ದುಬಾರಿ ಜೀವನ ಶೈಲಿ, ಗುಣಮಟ್ಟದ, ಶ್ರೀಮಂತಿಕೆ ಪ್ರತೀಕ. ಇಲ್ಲಿ ದಂಪತಿಯ ಲೈಂಗಿಕ ಕಾಮನೆಗಳು ಅರಳುವುದು ಸಹಜವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.