ಭಗತ್ ಸಿಂಗ್ ಜನ್ಮ ದಿನಾಚರಣೆಗೆ ಸೆಲ್ಯೂಟ್ ಮಾಡಿದ ಬಾಲಿವುಡ್ ನಟಿ
ಸೋಮವಾರ, 28 ಸೆಪ್ಟಂಬರ್ 2020 (20:15 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸ್ಮರಣೆ ಮಾಡಿದ್ದಾರೆ.
ಇಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 113 ನೇ ಜನ್ಮ ದಿನಾಚರಣೆ. ಅವರನ್ನು 23 ನೇ ವಯಸ್ಸಿನಲ್ಲಿ ಬ್ರಿಟಿಷರು ಗಲ್ಲಿಗೇರಿಸಿದರು. ಭಗತ್ ಸಿಂಗ್ ರನ್ನು ಮಾರ್ಚ್ 23, 1931 ರಂದು ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ರಾಜಗುರು ಮತ್ತು ಸುಖದೇವ್ ಥಾಪರ್ ಎಂಬ ಇಬ್ಬರು ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಪಾರವಾದದ್ದು.
ನಟಿ ಕಂಗನಾ ರಣಾವತ್ ಅವರು ಭಗತ್ ಸಿಂಗ್ ಅವರ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, “ಮೇರಾ ರಂಗ್ ಡಿ ಬಸಂತಿ ಚೋಳ ಒ ಮೇರಾ ರಂಗ್ ದೇ ಬಸಂತಿ ಚೋಳ ... # ಭಗತ್ ಸಿಂಗ್” ಎಂದು ಬರೆದು ಗೌರವ ಸೂಚಿಸಿದ್ದಾರೆ.