ಬೆಂಗಳೂರು: ಲಕ್ಷ್ಮಿ ಬಾರಮ್ಮ, ರಾಜಾ ರಾಣಿ ಶೋ, ಬಿಗ್ಬಾಸ್ ಸೀಸನ್ 9ರ ಮೂಲಕ ಜನಮನ್ನಣೆ ಗಳಿಸಿದ ನೇಹಾ ಗೌಡ ಮೊದಲ ಹೆಣ್ಣು ಮಗುವನ್ನು ಈಚೆಗೆ ಸ್ವಾಗತಿಸಿದರು. ಮೊದಲ ಬಾರಿ ಇದೀಗ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ.
ಮಕ್ಕಳ ದಿನಾಚರಣೆಯಂದು ನಮ್ಮ ಪುಟ್ಟ ಮಗುವಿನ ಫೋಟೋ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಿದೆ. ಜೀವನದಲ್ಲಿ ಮಗಳ ಆಗಮನವಾಗಿರುವುದಕ್ಕೆ ಖುಷಿಯಿದೆ ಎಂದು ಮಗಳ ಫೋಟೋ ಶೇರ್ ಮಾಡಿದ್ದಾರೆ. ಪ್ರೀತಿಯಲ್ಲಿದ್ದ ನೇಹಾ ಮತ್ತು ಚಂದನ್ ಅವರು 2018ರಲ್ಲಿ ಫೆಬ್ರವರಿಯಲ್ಲಿ ಮದುವೆಯಾದರು.
ನೇಹಾ ಹಾಗೂ ಚಂದನ್ ಅವರು ರಾಜರಾಣಿ ಶೋನಲ್ಲಿ ಭಾಗವಹಿಸಿದ್ದರು. ಚಂದನ್ ಅವರು ಈ ರಿಯಾಲಿಟಿ ಶೋ ಬಳಿಕ ಕಲರ್ಸ್ ಕನ್ನಡ ವಾಹಿನಿಯ ಅಭಿನಯಿಸಿದ್ದರು. ಅದಲ್ಲದೆ ನೇಹಾ ಅವರು ಬಿಗ್ಬಾಸ್ ಶೋನಲ್ಲಿ ಸ್ಪರ್ಧಿಸಿದ್ದರು.