ಮದುವೆಗಿಂತ ಮೊದಲೇ ಪ್ರೆಗ್ನೆಂಟ್ ಎಂದು ಘೋಷಿಸಿದ ಪಾರ್ವತಿ, ನಿತ್ಯಾ ಮೆನನ್!
ಈ ಇಬ್ಬರೂ ನಟಿಯರು ಇನ್ನೂ ಮದುವೆಯಾಗಿಲ್ಲ. ಜೊತೆಗೆ ಲವ್ ಲೈಫ್ ಬಗ್ಗೆಯೂ ಸೀಕ್ರೆಟ್ ಬಾಯ್ಬಿಟ್ಟಿಲ್ಲ. ಅದಕ್ಕೂ ಮೊದಲೇ ಪ್ರೆಗ್ನೆನ್ಸಿ ಘೋಷಣೆ ಮಾಡಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ಆದರೆ ಇದೆಲ್ಲಾ ಒಂದು ಸಿನಿಮಾ ವಿಚಾರವಾಗಿ ಮಾಡಿರುವ ಪೋಸ್ಟ್. ಮಲಯಾಳಂ ಸಿನಿಮಾವೊಂದರ ಪ್ರಮೋಷನ್ ಗಾಗಿ ಪಾರ್ವತಿ, ನಿತ್ಯಾ ಮೆನನ್, ಅಮೃತಾ ಸುಭಾಷ್ ಸೇರಿದಂತೆ ಕೆಲವು ನಟಿಯರು ಇದೇ ರೀತಿ ಪೋಸ್ಟ್ ಮಾಡಿದ್ದರು. ಆದರೆ ಪ್ರೆಗ್ನೆನ್ಸಿ ಕಿಟ್ ನೋಡಿ ನೆಟ್ಟಿಗರು ಒಂದು ಕ್ಷಣ ಹೌಹಾರಿದ್ದು ಸುಳ್ಳಲ್ಲ.