ಮಹಿಳೆಯರು ಗಂಡಸರ ಬಳಿ ಸೆಕ್ಸ್ ಬಯಸಿ ಬಂದರೆ ಅಪರಾಧ: ಶಕ್ತಿಮಾನ್ ನಟ ಮುಖೇಶ್ ಖನ್ನಾ ವಿವಾದಿತ ಹೇಳಿಕೆ
ಒಂದು ವೇಳೆ ಮಹಿಳೆಯರು ಗಂಡಸರ ಬಳಿ ಹೋಗಿ ಸೆಕ್ಸ್ ಬೇಕೆಂದು ನೇರವಾಗಿ ಕೇಳಿದರೆ ಅವಳು ಮಹಿಳೆಯೇ ಅಲ್ಲ, ಅವಳು ಅಪರಾಧ ಮಾಡುತ್ತಿದ್ದಾಳೆ ಎಂದರ್ಥ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಈಗ ಭಾರೀ ಟ್ರೋಲ್ ಗೊಳಗಾಗಿದೆ. ನೀವಿನ್ನೂ ಯಾವ ಶತಮಾನದಲ್ಲಿದ್ದೀರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ನೀವಿನ್ನೂ ಹುಚ್ಚು ಸಂಪ್ರದಾಯಗಳಲ್ಲೇ ಜೀವನ ಮಾಡಿ ಎಂದು ಕಿಡಿ ಕಾರಿದ್ದಾರೆ.
ಈ ಹಿಂದೊಮ್ಮೆ ಮಹಿಳೆಯರು ಮನೆಯಿಂದ ಹೊರಗೆ ಹೋಗುವುದೇ ಅಪರಾಧ ಎಂದು ಹೇಳಿಕೆ ನೀಡಿ ಮುಖೇಶ್ ಖನ್ನಾ ವಿವಾದಕ್ಕೊಳಗಾಗಿದ್ದರು. ಇದೀಗ ಮತ್ತೆ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ಟೀಕೆಗೊಳಗಾಗಿದ್ದಾರೆ.