ಸೃಜನ್ ಲೋಕೇಶ್ ವೈರಲ್ ಫೋಟೋ ಹಿಂದಿನ ರಹಸ್ಯ ಬಯಲು!

ಬುಧವಾರ, 17 ಏಪ್ರಿಲ್ 2019 (07:58 IST)
ಬೆಂಗಳೂರು: ಕೆಲವು ದಿನಗಳ ಹಿಂದೆ ನಟ, ನಿರೂಪಕ ಸೃಜನ್ ಲೋಕೇಶ್ ಮತ್ತು ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಭೇಟಿಯಾಗಿ ಸದ್ಯದಲ್ಲೇ ಒಂದು ಸುದ್ದಿ ಕೊಡ್ತೀವಿ ಎಂದು ಥಮ್ಸ್ ಅಪ್ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


ಹಾಗಿದ್ದರೆ ಸೃಜನ್ ಕಲರ್ಸ್ ಕನ್ನಡ ಬಿಟ್ಟು, ಜೀ ಕನ್ನಡದತ್ತ ಬರುತ್ತಿದ್ದಾರಾ? ಮಜಾ ಟಾಕೀಸ್ ಬಂದ್ ಮಾಡ್ತಾರಾ?  ಎಂದೆಲ್ಲಾ ಪ್ರಶ್ನೆಗಳು ಮೂಡಿತ್ತು. ಆ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.

ಅಂದು ಜೀ ಕನ್ನಡದಲ್ಲಿ ಮೋಡಿ ಮಾಡಿದ್ದ ‘ಚೋಟಾ ಚಾಂಪಿಯನ್’ ಕಾರ್ಯಕ್ರಮ ಮತ್ತೆ ಮೂಡಿಬರಲಿದ್ದು, ಸೃಜನ್ ಮತ್ತೆ ಈ ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ. ಈ ಕಾರ್ಯಕ್ರಮ ಲೋಕೇಶ್ ಪ್ರೊಡಕ್ಷನ್ ನಡಿಯಲ್ಲೇ ಮೂಡಿಬಂದಿತ್ತು. ಈಗ ಮತ್ತೊಂದು ಸೀಸನ್ ಶುರುವಾಗುತ್ತಿದೆ. 3 ರಿಂದ 5 ವರ್ಷಗಳೊಳಗಿನ ಮಕ್ಕಳಿಗಾಗಿ ಈ ಶೋ ಮೂಡಿಬರಲಿದೆ. ದಿನಾಂಕ ಸದ್ಯದಲ್ಲೇ ಪ್ರಕಟವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ