ಬಾಲಿವುಡ್ ನ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ ನಟಿ ರಶ್ಮಿಕಾ ಮಂದಣ‍್ಣ

ಬುಧವಾರ, 28 ಏಪ್ರಿಲ್ 2021 (12:41 IST)
ಹೈದರಾಬಾದ್ : ಸ್ಯಾಂಡಲ್ ವುಡ್ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ‍್ಣ ಬಳಿಕ ಟಾಲಿವುಡ್ ಗೆ ಎಂಟ್ರಿ ಕೊಟ್ಟು ಖ್ಯಾತ ನಟಿ ಎನಿಸಿಕೊಂಡಿದ್ದರು.

ಅನಂತರ ಬಾಲಿವುಡ್ ಗೂ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ‍್ಣ ಸದ್ಯಕ್ಕೆ ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆ ನಟಿಸುತ್ತಿದ್ದು,   ಈ ಚಿತ್ರದ ಶೂಟಿಂಗ್ ಭಾರೀ ವೇಗದಲ್ಲಿ ಸಾಗುತ್ತಿದೆ. ಬಳಿಕ ಅವರು ಮತ್ತೊಂದು ಬಾಲಿವುಡ್ ಚಿತ್ರಕ್ಕೆ ಸಹಿ ಹಾಕಿದ್ದು, ಇದರಲ್ಲಿ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದರ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ.

ಇದೀಗ ಅವರು ತಮ್ಮ ಅಭಿಮಾನಿಗಳ ಜೊತೆಗೆ ಇನ್ ಸ್ಟಾಗ್ರಾಂನಲ್ಲಿ ಸಂವಹನ ನಡೆಸಿದ್ದು, ತಾವು ಮೂರನೇ ಬಾಲಿವುಡ್ ಚಿತ್ರಕ್ಕೆ ಸಹಿ ಹಾಕಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ