ನಟಿ ರಿಯಾ ಚಕ್ರವರ್ತಿ ಹಾಜರ್ : ನಟ ಸುಶಾಂತ ಸಹೋದರಿ ಹೇಳಿದ್ದೇನು?

ಶನಿವಾರ, 8 ಆಗಸ್ಟ್ 2020 (22:27 IST)
ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್ ನ ತನಿಖೆ ತ್ವರಿತಗೊಂಡಿದೆ.


ಈ ಕೇಸ್ ಗೆ ಸಂಬಂಧಪಟ್ಟಂತೆ ನಟಿ ಹಾಗೂ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಕೊನೆಗೂ ಜಾರಿ ನಿರ್ದೇಶನಾಲಯದ ಎದುರು ಹಾಜರಾಗಿದ್ದಾರೆ.

ಈ ಸಂಬಂಧವಾಗಿ ಸುಶಾಂತ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸಾಮಾಜಿಕ ಜಾಲತಾಣಗಳಲ್ಲಿ ಕಟುವಾಗಿ ಬರೆದುಕೊಂಡು ಟಾಂಗ್ ನೀಡಿದ್ದಾರೆ.

ಸಿಕ್ಕಿಹಾಕಿಕೊಳ್ಳುವ ಮೊದಲು ಎಚ್ಚರವಾಗಿರಬೇಕು. ಅಧ್ಯಾತ್ಮಿಕ ಜಗತ್ತಿನಲ್ಲಿ ಯಾರನ್ನು ರಕ್ಷಿಸಲಾಗುತ್ತಿದೆ ಎಂಬುದು ಗೊತ್ತೇ ಆಗಿರುವುದಿಲ್ಲ. ಹರ ಹರ ಮಹಾದೇವ್, ಜಸ್ಟೀಸ್ ಫಾರ್ ಸುಶಾಂತ ಅಂತ ಬರೆದುಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ