ಮದುವೆ ಸೆಟ್ ಆದಮೇಲೆ ಆಫರ್‌ಗಳು ಕಮ್ಮಿ ಆಗಿವೆ

ಸೋಮವಾರ, 12 ಡಿಸೆಂಬರ್ 2016 (12:23 IST)
ಮದುವೆ ಸೆಟ್ ಆದರೆ ಸಾಕಪ್ಪಾ ಅಂತ ಕೆಲವರು ಕನಸು ಕಾಣುತ್ತಿರುತ್ತಾರೆ. ಜೀವನದಲ್ಲಿ ಒಮ್ಮೆ ಮಾತ್ರ ಬರುತಂತ ಮದುವೆ ಅಂದ್ರೆ ಯಾರಿಗೆ ತಾನೆ ಖುಷಿಯಾಗಲ್ಲ ಹೇಳಿ. ಅದರಲ್ಲೂ ಸಿನಿಮಾ ತಾರೆಗಳ ಮದುವೆ ಅಂದ್ರೆ ಒಂಥರಾ ಗುಟ್ಟಾಗಿಯೇ ನಡೆದು ಹೋಗುವ ವಿಚಾರ. ಆದರೆ ಸಮಂತಾ ಮಾತ್ರ ತಮ್ಮ ಮದುವೆಯನ್ನು ಈಗಾಗಲೆ ಭರ್ಜರಿ ಪ್ರಚಾರ ಮಾಡಿಕೊಂಡಿದ್ದಾರೆ.
 
ಟಾಲಿವುಡ್ ಹೀರೋ ನಾಗಾರ್ಜುನ ಮಗ ನಾಗಚೈತನ್ಯ ಜೊತೆ ಸಮಂತಾ ಮದುವೆಯಾಗುತ್ತಿರುವ ವಿಚಾರ ಗೊತ್ತಿರುವುದೇ.  ಮದುವೆಗೂ ಮುನ್ನವೇ ಕೈಯಲ್ಲಿರು ಪ್ರಾಜೆಕ್ಟ್‌ಗಳನ್ನು ಮುಗಿಸಿಕೊಂಡಿದ್ದಾರೆ. ಆದರೆ ಹೊಸ ಆಫರ್‌ಗಳು ಬರುತ್ತಿಲ್ಲವಂತೆ. 
 
ಇದರಿಂದ ಸಮಂತಾ ಸ್ವಲ್ಪ ಕಂಗಾಲಾದಂತಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲೂ ಹೇಳಿಕೊಂಡಿದ್ದಾರೆ ಸಮಂತಾ. ಮದುವೆ ಬಳಿಕವೂ ತಾನು ಬಣ್ಣಹಚ್ಚುತ್ತೇನೆ ಎಂದಿದ್ದರು ಸಮಂತಾ. ಮದುವೆ ಆದ ಮೇಲೆ ಅಭಿನಯಿಸುವುದಕ್ಕೆ ನಮ್ಮದೇನು ಅಭ್ಯಂತರ ಇಲ್ಲ ಎಂದು ಭಾವಿ ಮಾವ ನಾಗಾರ್ಜುನ ಮತ್ತು ಭಾವಿ ಗಂಡ ನಾಗಚೈತನ್ಯ ಸಹ ಒಪ್ಪಿಗೆ ಸೂಚಿಸಿದ್ದರಂತೆ. ಆದರೂ ನಿರ್ಮಾಪಕ, ನಿರ್ದೇಶಕರು ಅವಕಾಶ ಕೊಡಲು ಮುಂದೆ ಬರುತ್ತಿಲ್ಲವಂತೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ