ವಕಿಲ್ ಸಾಬ್ ಚಿತ್ರದ ಹಾಡಿನಲ್ಲಿ ಪವನ್ ಜೊತೆ ಕುಣಿಯಲಿದ್ದಾರಂತೆ ನಟಿ ತಮನ್ನಾ

ಸೋಮವಾರ, 15 ಫೆಬ್ರವರಿ 2021 (09:12 IST)
ಹೈದರಾಬಾದ್ : ನಟ ಪವನ್ ಕಲ್ಯಾಣ್ ಅವರ ‘ವಕಿಲ್ ಸಾಬ್’ ಚಿತ್ರದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ. ಆದರೆ ಇದರಲ್ಲಿ ನಟಿ ತಮನ್ನಾ ಯಾವುದೇ ಪಾತ್ರ ಮಾಡಲಿಲ್ಲ. ಹಾಗಾಗಿ ನಿರ್ಮಾಪಕರು ನಟಿ ತಮನ್ನಾ ಅವರನ್ನು ಈ ಚಿತ್ರಕ್ಕೆ ಸಂಬಂಧಿಸಿದ ಹಾಡೊಂದರಲ್ಲಿ ಕುಣಿಸುವ ನಿರ್ಧಾರ ಮಾಡಿದ್ದಾರೆ.

ಈ ಚಿತ್ರದ  ಪ್ರಚಾರದ ಹಾಡಿನಲ್ಲಿ ನಟಿ ತಮನ್ನಾ ಅವರನ್ನು ಕುಣಿಸುವ ನಿರ್ಧಾರ ಮಾಡಿದ್ದಾರೆ. ಅದಕ್ಕಾಗಿ ಈಗಾಗಲೇ ಹಾಡು ಕೂಡ ರೆಡಿಯಾಗಿದೆ. ಆದರೆ ಈ ಹಾಡಿನಲ್ಲಿ ತಮನ್ನಾ ಜೊತೆಗೆ ಪವನ್ ಕಲ್ಯಾಣ್ ಅವರು ಇದ್ದರೆ ಒಳ್ಳೆಯದು ಎಂಬ ಚರ್ಚೆ ನಡೆಯುತ್ತಿದ್ದ ಹಿನ್ನಲೆಯಲ್ಲಿ  ರಿಮೇಕ್ ಚಿತ್ರದ ಶೂಟಿಂಗ್ ನಲ್ಲಿದ್ದ ಪವನ್ ಕಲ್ಯಾಣ್ ಅವರು 2 ಗಂಟೆಗಳ ಕಾಲ ಈ ಪ್ರಚಾರ ಗೀತೆಯಲ್ಲಿ ತಮನ್ನಾ ಜೊತೆ  ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ