ಬೆಂಗಳೂರು: ಕಾಂತಾರ ಬಳಿಕ ಈಗ ಕಾಂತಾರ ಚಾಪ್ಟರ್ 1 ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಕಾಂತಾರ ಪಾರ್ಟ್ 3 ಬರುತ್ತಾ? ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ರಿಷಬ್ ಶೆಟ್ಟಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಕಾಂತಾರ ಎನ್ನುವ ಸಿನಿಮಾ ಕೇವಲ ರಿಷಬ್ ಶೆಟ್ಟಿ ಮಾತ್ರವಲ್ಲ, ಕನ್ನಡ ಚಿತ್ರರಂಗಕ್ಕೇ ಒಂದು ಕಿರೀಟವಿದ್ದಂತೆ. ಕಾಂತಾರ ಸಕ್ಸಸ್ ದೇಶದಾದ್ಯಂತ ಮತ್ತೆ ಕನ್ನಡ ಚಿತ್ರರಂಗವನ್ನು ಇಲ್ಲಿನ ಸಂಸ್ಕೃತಿಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿತ್ತು.
ಹೀಗಾಗಿ ಕಾಂತಾರ ಚಾಪ್ಟರ್ 1 ಸಿನಿಮಾವನ್ನು ಅಷ್ಟೇ ಶ್ರದ್ಧೆಯಿಂದ, ಶ್ರಮವಹಿಸಿ ಚಿತ್ರತಂಡ ಮಾಡಿದೆ. ಇದೀಗ ರಿಷಬ್ ಶೆಟ್ಟಿ ಬಿಡುಗಡೆಯ ಖುಷಿಯಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಕಾಂತಾರ ಪಾರ್ಟ್ 3 ಬರುತ್ತಾ ಎಂದು ಕೇಳಿದಾಗ ಸದ್ಯಕ್ಕೆ ನನಗೀಗ ಸ್ವಲ್ಪ ರೆಸ್ಟ್ ಮಾಡಿದ್ರೆ ಸಾಕಾಗಿದೆ. ಕಳೆದ ಮೂರು ವರ್ಷಗಳಿಂದ ನಾವು ಕಾಂತಾರ ಪ್ರಪಂಚದಲ್ಲಿ ಮುಳುಗಿ ಹೋಗಿದ್ದೆವು. ನಿಜ ಜಗತ್ತಿನಲ್ಲಿ ಏನಾಗುತ್ತಿದೆ ಎಂದೇ ನಮಗೆ ಗೊತ್ತಿಲ್ಲ. ಮನೆಗೂ ಸರಿಯಾಗಿ ಹೋಗ್ತಿರಲಿಲ್ಲ. ಮಕ್ಕಳು ಶಾಲೆಗೆ ಹೋಗ್ತಿದ್ದಾರೋ ಇಲ್ವೋ ಎಂದೂ ನೋಡಿಲ್ಲ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ತೇನೆ. ಆಮೇಲೆ ಉಳಿದಿದ್ದನ್ನು ನೋಡೋಣ ಎಂದಿದ್ದಾರೆ.