ಪುತ್ರನ ಜತೆ ತೆರೆ ಹಂಚಿಕೊಂಡ ನಟಿ ತಾರಾ
ನಟಿ ತಾರಾ ಮತ್ತು ಛಾಯಾಗ್ರಾಹಕ ಎಚ್ ಸಿ ವೇಣು ದಂಪತಿ ಪುತ್ರ ಕೃಷ್ಣ ಈಗ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟಿದ್ದಾರೆ. ತೆರೆಯಲ್ಲೂ ತಮ್ಮ ತಾಯಿ ಜತೆಗೆ ಮಗನ ಪಾತ್ರವನ್ನೇ ಮಾಡಿದ್ದಾನೆ ಪುಟಾಣಿ ಕೃಷ್ಣ. ಅಷ್ಟೇ ಅಲ್ಲ ಅಮ್ಮನ ಜತೆಗೆ ಡಬ್ಬಿಂಗ್ ಕೂಡಾ ಮಾಡಿದ್ದಾನೆ. ವಿಶೇಷವೆಂದರೆ ಈ ಸಿನಿಮಾದ ಛಾಯಾಗ್ರಹಣವನ್ನು ವೇಣು ಅವರೇ ಮಾಡಿದ್ದಾರೆ. ಆ ಮೂಲಕ ತಾರಾ ಅವರ ಇಡೀ ಫ್ಯಾಮಿಲಿ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿದೆ.