ಒಳ್ಳೆ ಹುಡುಗ ಪ್ರಥಮ್ ಹಾಡಿನಲ್ಲೂ ‘ಸ್ಟಾರ್ ವಾರ್’!

ಗುರುವಾರ, 19 ಸೆಪ್ಟಂಬರ್ 2019 (09:30 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ಸ್ಟಾರ್ ವಾರ್ ಎಂಬ ಶಬ್ಧ ಭಾರೀ ಸದ್ದು ಮಾಡುತ್ತಿದೆ. ಇದೀಗ ಒಳ್ಳೆ ಹುಡುಗ ಪ್ರಥಮ್ ನಿರ್ದೇಶಿಸಿ ನಟಿಸಿರುವ ನಟ ಭಯಂಕರ ಸಿನಿಮಾ ಹಾಡಿನ ಸಾಲಿನಲ್ಲೂ ಈ ಪದ ಸದ್ದು ಮಾಡುತ್ತಿದೆ.


ಪ್ರದ್ಯೋತ್ತಾನ್ ಸಂಗೀತ ನೀಡಿರುವ ನಟ ಭಯಂಕರ ಟೈಟಲ್ ಹಾಡು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದು, ಆ ಪವರ್ ಫುಲ್ ಹಾಡು ನಿನ್ನೆ ಬಿಡುಗಡೆಯಾಗಿದೆ. ಈ ಹಾಡಿಗೆ ಈಗ ಯೂ ಟ್ಯೂಬ್ ನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಥಮ್ ಪರಿಚಯಿಸುವ ಹಾಡಿನ ಸಾಲಿನಲ್ಲಿ ಸ್ಟಾರ್ ವಾರ್ ಎಂಬ ಪದ ಸೇರಿಕೊಂಡಿರುವುದು ಹಾಡಿಗೆ ಕಿಕ್ ಕೊಟ್ಟಿದೆ. ಸ್ಟಾರ್ ವಾರ್ ಗೆ ಡೋಂಟ್ ಕೇರ್ ಎಂಬ ಪದವನ್ನು ಹಾಡಿನಲ್ಲಿ ಬಳಸಲಾಗಿದೆ. ಅದೇನೇ ಇರಲಿ, ಈ ಉಪೇಂದ್ರ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಈಗ ಹಿಟ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ