ಜೊತೆ ಜೊತೆಯಲಿ ಮೇಘಾ ಶೆಟ್ಟಿಗೆ ಫೈಟ್ ಕೊಡಲು ಬಂದ ಮತ್ತೊಬ್ಬ ಪವರ್ ಫುಲ್ ನಾಯಕಿ!

ಮಂಗಳವಾರ, 10 ನವೆಂಬರ್ 2020 (10:40 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ಸಿನಿಮಾ ಮೂಲಕ ಜೊತೆ ಜೊತೆಯಲಿ ಧಾರವಾಹಿಯ ನಾಯಕಿ ಮೇಘಾ ಶೆಟ್ಟಿ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಸುದ್ದಿ ಎಲ್ಲರಿಗೂ ಗೊತ್ತೇ ಇದೆ.

 

ಈಗ ಮೇಘಾ ಶೆಟ್ಟಿಗೆ ಪೈಪೋಟಿ ಕೊಡಲು ತ್ರಿಬಲ್ ರೈಡಿಂಗ್ ಸಿನಿಮಾಗೆ ಮತ್ತೊಬ್ಬ ಪವರ್ ಫುಲ್ ನಾಯಕಿಯ ಆಗಮನವಾಗಿದೆ. ಈ ಸಿನಿಮಾದ ಮತ್ತೊಬ್ಬ ನಾಯಕಿಯಾಗಿ ನಟಿ ಅದಿತಿ ಪ್ರಭುದೇವ ಅಭಿನಯಿಸಲಿರುವುದು ಪಕ್ಕಾ ಆಗಿದೆ. ಹೀಗಾಗಿ ಗಣೇಶ್ ಗೆ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿರುವುದು ಕನ್ ಫರ್ಮ್ ಆಗಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೆದಿದೆ. ಸದ್ಯದಲ್ಲೇ ಅದಿತಿ ಕೂಡಾ ತ್ರಿಬಲ್ ರೈಡಿಂಗ್ ಸೆಟ್ ಗೆ ಸೇರ್ಪಡೆಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ