ಹೈದರಾಬಾದ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ತ್ರಿಬಲ್ ರೈಡಿಂಗ್

ಗುರುವಾರ, 24 ಸೆಪ್ಟಂಬರ್ 2020 (11:05 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಲಿರುವ ತ್ರಿಬಲ್ ರೈಡಿಂಗ್ ಸಿನಿಮಾ ಶೂಟಿಂಗ್ ಇನ್ನೇನು ಆರಂಭವಾಗಲಿದೆ. ಅದಕ್ಕೂ ಮೊದಲು ಚಿತ್ರತಂಡ ಸಂಗೀತ ಸಂಯೋಜನೆ ಕೆಲಸ ಮುಗಿಸುತ್ತಿದೆ.


ಹೈದರಾಬಾದ್ ನಲ್ಲಿ ಚಿತ್ರದ ಸಂಗೀತ ಸಂಯೋಜನೆ ಕೆಲಸಗಳು ನಡೆಯುತ್ತಿದೆ. ಟಾಲಿವುಡ್ ಸಂಗೀತ ನಿರ್ದೇಶಕ ಸಾಯ್ ಕಾರ್ತಿಕ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದಕ್ಕಾಗಿ ನಟ ಗಣೇಶ್ ಮತ್ತು ಚಿತ್ರತಂಡ ಹೈದರಾಬಾದ್ ನಲ್ಲಿದೆ. ಲಾಕ್ ಡೌನ್ ಬಳಿಕ ಗಣೇಶ್ ಶೂಟಿಂಗ್ ಆರಂಭಿಸಲಿರುವ ಮೊದಲ ಸಿನಿಮಾ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ