ಸರ್ಜಿಕಲ್ ಚೇರ್ ಬಳಿಕ ಟಿವಿಗೆ ಡಿಮ್ಯಾಂಡ್ ಮಾಡಿದ ದರ್ಶನ್

Sampriya

ಮಂಗಳವಾರ, 3 ಸೆಪ್ಟಂಬರ್ 2024 (15:25 IST)
ಬೆಂಗಳೂರು: ಬೇಡಿಕೆಯಿಟ್ಟ ಸರ್ಜಿಕಲ್ ಚೇರ್ ಸಿಕ್ಕ ಬೆನ್ನಲ್ಲೇ ನಟ ದರ್ಶನ್ ಅವರು ಬಳ್ಳಾರಿ ಜೈಲಾಧಿಕಾರಿಗಳ ಬಳಿ ಟಿವಿ ಹಾಕಿಸಿಕೊಡುವಂತೆ  ಮನವಿ ಮಾಡಿದ್ದಾರಂತೆ. ವಿಐಪಿ ಟ್ರೀಟ್‌ಮೆಂಟ್ ಹಿನ್ನೆಲೆ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಅವರು ಸಾಮಾನ್ಯ ಕೈದಿಯಂತೆ ಬಳ್ಳಾರಿ ಜೈಲಿನಲ್ಲಿ ದಿನಕಳೆಯುತ್ತಿದ್ದಾರೆ.

ಇನ್ನೂ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅವರಿಗೆ ಬೇಕಾದ ಎಲ್ಲ ರೀತಿಯ ಸೌಕರ್ಯಗಳನ್ನು ಸಹ ಖೈದಿಗಳು ಮಾಡಿಕೊಟ್ಟಿದ್ದರು ಎಂಬ ಆರೋಪ ವ್ಯಕ್ತವಾಗಿತ್ತು. ಅದಕ್ಕೆ ಅನುಗುಣವಾಗಿದೆ ಕೈದಿ ವಿಲ್ಸನ್ ಗಾರ್ಡನ್ ನಾಗ ಆಯೋಜಿಸಿದ ಟೀ ಪಾರ್ಟಿಯಲ್ಲಿ ದರ್ಶನ್ ಭಾಗಿಯಾಗಿರುವುದು. ದರ್ಶನ್ ಅವರು ಟೀ ಮಗ್‌ನೊಂದಿಗೆ ಸಿಗರೇಟ್ ಸೇವಿಸುತ್ತಿರುವ ವಿಡಿಯೋ ವೈರಲ್ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಈ ಸಂಬಂಧ ಡಿಐಜಿ ಶೇಷಾ ಅವರು ಪ್ರತಿಕ್ರಿಯಿಸಿ, ಯಾವುದೇ ಹೆಚ್ಚುವರಿ ಸವಲತ್ತುಗಳನ್ನು ನೀಡಿಲ್ಲ. ಎಲ್ಲನೂ ಕಾನೂನು ಕ್ರಮದಡಿಯಲ್ಲೇ ನಡೆಯುತ್ತಿದೆ ಎಂದಿದ್ದರು. ಇನ್ನೂ ವಿಚಾರಣಾಧೀನ ಕೈದಿಯಾಗಿರುವುದರಿಂದ ಅವರಿಗೆ ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ಇರಿಸಲಾಗಿತ್ತು. ಇನ್ನೂ ಪರಪ್ಪನ ಅಗ್ರಹಾರ ಸೆಲ್‌ನಲ್ಲಿ ಟಿವಿ ವ್ಯವಸ್ಥೆಯಿತ್ತು. ಆದರೆ ಇದೀಗ ಬಳ್ಳಾರಿ ಜೈಲಿನಲ್ಲಿ ಆ ವ್ಯವಸ್ಥೆಯನ್ನು ಮಾಡಿಕೊಟ್ಟಿಲ್ಲ.

ಸದ್ಯ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಒಂದು ಸೆಲ್‌ನಲ್ಲಿ ಒಬ್ಬ ಇದ್ದಾರೆ. ಅದಲ್ಲದೆ ವಿಐಪಿ ಎಂದಾ ಮಾತ್ರಕ್ಕೆ ಪರಪ್ಪನ ಅಗ್ರಹಾರದಂತೆ ಯಾವುದೇ ಹೆಚ್ಚುವರಿ ಸವಲತ್ತು ನೀಡಿಲ್ಲ. ಇನ್ನೂ ಶುಕ್ರವಾರ ಪತ್ನಿಯ ಜತೆ ಮಾತನಾಡಲು ಕೂಡಾ ಸಾಮಾನ್ಯ ಕೈದಿಯಂತೆ ಅವರನ್ನು ಬೇರೆ ಕೊಠಡಿಗೆ ಕರೆತರಲಾಗಿದೆ. ಇದೀಗ ದರ್ಶನ್ ಅವರು ಜೈಲು ಅಧಿಕಾರಿಗಳ ಮುಂದೆ ಟಿವಿ ಹಾಕಿಸಿಕೊಡುವಂತೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ