`ಮುಗುಳು ನಗೆ’ಗೆ ಪುರುಷರ ಪ್ರವೇಶ ನಿರ್ಬಂಧ...! ಯಾಕೆ…? ಈ ಸ್ಟೋರಿ ಓದಿ…

ಗುರುವಾರ, 31 ಆಗಸ್ಟ್ 2017 (12:03 IST)
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಅಭಿನಯದ `ಮುಗುಳು ನಗೆ’ ನಾಳೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಹೌಸ್ ಫುಲ್ ಆಗಿದೆ.

ವಿಶೇಷ ಅಂದರೆ ಇಂದು ರಾತ್ರಿಯಿಂದಲೇ ಒರಾಯನ್ ಮಾಲ್ನ ಪಿವಿಆರ್ ಮಲ್ಟಿಪ್ಲೆಕ್ಸ್ ನ 5 ಸ್ಕ್ರೀನ್ ಹಾಗೂ ವಿರೇಶ ಚಿತ್ರಮಂದಿರದಲ್ಲಿ ಮುಗುಳುನಗೆ ವಿಶೇಷ ಪ್ರದರ್ಶನ ಕಾಣಲಿದೆ. ಗೋಲ್ಡ್ ಕ್ಲಾಸ್ ನಲ್ಲಿ ಮಹಿಳೆಯರಿಗಾಗಿ ಮಾತ್ರ ಮೀಸಲಿಡಲಾಗಿದೆ. ಈ ಮೀಸಲಿಟ್ಟ ಜಾಗದಲ್ಲಿ ಸೆಲ್ಫಿ ಕಳುಹಿಸಿದ ಮಹಿಳೆಯರಿಗೆ `ಮುಗುಳು ನಗೆ’ ನೋಡುವ ಅವಕಾಶವಿದೆ.

ಸಂಜೆಯಾಗುತ್ತಿದ್ದಂತೆ ಮಹಿಳಾಮಣಿಯರು ಸೀರಿಯಲ್ ಪ್ರಪಂಚದಲ್ಲಿ ಮುಳುಗಿ ಹೋಗುತ್ತಾರೆ. ಹೀಗಾಗಿ ಅವರನ್ನ ಚಿತ್ರಮಂದಿರಕ್ಕೆ ಕರೆತರುವ ದೃಷ್ಟಿಯಿಂದ ಭಟ್ರು ಇದಕ್ಕಾಗಿಯೇ `ಮುಗುಳು ನಗೆ’ ಹೆಸರಲ್ಲಿ ಮಹಿಳೆಯರಿಗಾಗಿ ನಗುವಿನಲ್ಲಿರುವ ಸೆಲ್ಫೀ ಕಳುಹಿಸುವ ಸ್ಪರ್ಧೆ ಏರ್ಪಡಿಸಿದ್ದರು. ಇದರಲ್ಲಿ ಆಯ್ಕೆಯಾದ 200 ಮಂದಿ ಜೊತೆಗೆ 100 ಮಹಿಳಾ ಸೆಲೆಬ್ರಿಟಿಗಳು ಈ ಚಿತ್ರ ವೀಕ್ಷಿಸಲಿದ್ದಾರೆ. ಇಲ್ಲಿ ಪುರುಷರಿಗೆ ಪ್ರವೇಶ ನಿರ್ಬಂಧ.

ಇನ್ನು ನಾಳೆ ಮಲ್ಟಿಪ್ಲೆಕ್ಸ್ ಸೇರಿದಂತೆ 240 ಚಿತ್ರಮಂದಿರಗಳಲ್ಲಿ ಮುಗುಳು ನಗೆ ಮಂದಹಾಸ ಬೀರಲಿದೆ. 10 ವರ್ಷದ ಬಳಿಕ ಭಟ್ರು ಜೊತೆ ಗಣಿ ಕೆಲಸ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಮುಂಗಾರು ಮಳೆ ಸುರಿಸಿದ ಈ ಹಿಟ್ ಜೋಡಿಯ `ಮುಗುಳು ನಗೆ’ಯ ಮೋಡಿ ಹೇಗಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ