ಐಶ್ವರ್ಯ ರೈ ತಂದೆ ಕೃಷ್ಣರಾಜ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಐಸಿಯೂಗೆ ಶಿಫ್ಟ್ ಮಾಡಲಾಗಿದೆ.
ಇದು ಐಶ್ವರ್ ರೈಗೆ ಅತ್ಯಂತ ನೋವಿನ ಸಂದರ್ಭವಾಗಿದ್ದು, ಪತಿ ಅಭಿಷೇಕ್ ಜೊತೆ ಆಸ್ಪತ್ರೆಗೆ ನಿರಂತರ ಭೇಟಿ ನೀಡುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭ ಐಶ್ವರ್ಯ ರೈ ಅತೀವ ದುಃಖತಪ್ತರಾಗಿದ್ದದ್ದು ಕಂಡುಬಂದಿದೆ.
ಕೃಷ್ಣರಾಜ್`ಗೆ ಜನವರಿಯಲ್ಲೂ ಅನಾರೋಗ್ಯ ಕಾಡಿತ್ತು. ಬಳಿಕ ಇದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.