ಯುವರಾಜ್ ಕುಮಾರ್ ಸಿನಿಮಾಗೆ ಉಪೇಂದ್ರ ಪುತ್ರಿ ಹೀರೋಯಿನ್?

ಶನಿವಾರ, 3 ಡಿಸೆಂಬರ್ 2022 (09:10 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ಸ್ಟಾರ್ ಮಕ್ಕಳು ಒಬ್ಬೊಬ್ಬರಾಗಿ ಸಿನಿಮಾ ರಂಗಕ್ಕೆ ಕಾಲಿಡುವ ಟ್ರೆಂಡ್ ಶುರುವಾಗಿದೆ.
 

ಇತ್ತೀಚೆಗಷ್ಟೇ ನೆನಪಿರಲಿ ಪ್ರೇಮ್ ಪುತ್ರಿ ಹೀರೋಯಿನ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವ ಸುದ್ದಿ ಬಂದಿತ್ತು. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಐಶ್ವರ್ಯಾ ಹೀರೋಯಿನ್‍ ಆಗುವ ಸುದ್ದಿ ಕೇಳಿಬರುತ್ತಿದೆ.

ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಸೆಟ್ಟೇರುತ್ತಿದೆ. ಈ ಸಿನಿಮಾಗೆ ಐಶ್ವರ್ಯಾ ಉಪೇಂದ್ರ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಐಶ್ವರ್ಯಾ ಈಗಾಗಲೇ ಬಾಲ ನಟಿಯಾಗಿ ಒಂದು ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈಗ ಹೀರೋಯಿನ್ ಆಗಿ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ