ಪ್ರೇಮಿಗಳ ದಿನದಂದು ಪತ್ನಿ ಕಾಜೋಲ್‌ಗೆ ಲವ್ ನೋಟ್ ಬರೆದ ಅಜಯ್ ದೇವಗನ್‌

Sampriya

ಶನಿವಾರ, 15 ಫೆಬ್ರವರಿ 2025 (18:14 IST)
Photo Courtesy X
ಮುಂಬೈ: ಬಾಲಿವುಡ್‌ನ ಸೂಪರ್ ಸ್ಟಾರ್ ಜೋಡಿ ಅಜಯ್ ದೇವಗನ್ ಹಾಗೂ ಪತ್ನಿ ಕಾಜೋಲ್ ಅವರು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು.  ಅಜಯ್ ಅವರು ಕಾಜೋಲ್ ಮುಂದೆ ತಮ್ಮ ಪ್ರೀತಿಯನ್ನು ತೋರ್ಪಡಿಸಿಕೊಳ್ಳುವಲ್ಲಿ ಹಿಂದೆ ಸರಿಯುತ್ತಾರೆ. ಕೆಲವೊಮ್ಮೆ ಈ ಜೋಡಿ ಸಾರ್ವಜನಿಕವಾಗಿ ಕ್ಯಾಮೆರಾಗೆ ಫೋಸ್ ನೀಡುವಾಗ ಸೆರೆಯಾದುಂದು ಉಂಟು. ಇವರಿಬ್ಬರ ಪ್ರೀತಿ ಬಗ್ಗೆ ಟ್ರೋಲ್ ಆಗುವುದು ಉಂಟು.

ಅಚ್ಚರಿ ಏನೆಂದರೆ ಪ್ರೇಮಿಗಳ ದಿನದಂದು ಅಜಯ್ ದೇವಗನ್ ಅವರು ತಮ್ಮ ಪತ್ನಿ ಕಾಜೋಲ್‌ಗೆ ಪ್ರೇಮಿಗಳ ದಿನದ ಶುಭಕೋರಿದ್ದಾರೆ. ಅದಲ್ಲದೆ ಹಳೆಯ ರೋಮ್ಯಾಂಟಿಕ್ ಬ್ಯೂಟಿಫುಲ್ ಫೋಟೋವನ್ನು ಶೇರ್  ಮಾಡಿ ಕಾಜೋಲ್‌ಗೆ ಲವ್ ನೋಟ್ ಬರೆದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಹೃದಯಸ್ಪರ್ಶಿ ಪೋಸ್ಟ್‌ನಲ್ಲಿ, 'ಸಿಂಗಮ್' ನಟ ಕಾಜೋಲ್ ಅವರನ್ನು ಪ್ರೀತಿಸುವ ನಿರ್ಧಾರವನ್ನು ನೆನಪಿಸಿಕೊಂಡರು ಮತ್ತು "ನನ್ನ ಹೃದಯವನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂದು ಮೊದಲೇ ಯೋಚಿಸಿದೆ ... ಮತ್ತು ಇಲ್ಲಿಯವರೆಗೆ, ಇದು ಒಂದೇ ಆಗಿರುತ್ತದೆ! ನನ್ನ # ವ್ಯಾಲೆಂಟೈನ್ ಇಂದು ಮತ್ತು ಎಂದೆಂದಿಗೂ" ಎಂದು ಕೆಂಪು ಹೃದಯದೊಂದಿಗೆ ಬರೆದಿದ್ದಾರೆ.

ಪ್ರೇಮಿಗಳ ದಿನದಂದು ತಮ್ಮ ಪ್ರೀತಿಯನ್ನು ಆಚರಿಸಿದ ಬಿ-ಟೌನ್ ಜೋಡಿ ಅಜಯ್-ಕಾಜೋಲ್ ಮಾತ್ರವಲ್ಲ. ನವವಿವಾಹಿತ ಜೋಡಿ ಕೃತಿ ಕರ್ಬಂದಾ ಮತ್ತು ಪುಲ್ಕಿತ್ ಸಾಮ್ರಾಟ್ ವಿವಾಹಿತ ದಂಪತಿಗಳಾಗಿ ತಮ್ಮ ಮೊದಲ ಪ್ರೇಮಿಗಳ ದಿನವನ್ನು ಆಚರಿಸಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ