ಅಲ್ಲು ಅರ್ಜುನ್ ಬಂಧನದ ವೇಳೆ ಹೈಡ್ರಾಮಾ, ಪತ್ನಿ, ತಂದೆ ಕಣ್ಣೀರು: ವಿಡಿಯೋ
ಅಲ್ಲು ಅರ್ಜುನ್ ಮನೆಗೆ ಬಂದ ಪೊಲೀಸರು ಇಂದು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಈ ವೇಳೆ ಅವರ ಮನೆ ಮುಂದೆ ಹೈಡ್ರಾಮಾವೇ ನಡೆದಿದೆ. ಅಲ್ಲು ಅರ್ಜುನ್ ರನ್ನು ಬಂಧಿಸಿ ಪೊಲೀಸರು ತಮ್ಮ ವಾಹನದಲ್ಲಿ ಕುಳ್ಳಿರಿಸಲು ಹೋದಾಗ ಅವರ ಪತ್ನಿ, ತಂದೆ ಸೇರಿದಂತೆ ಸಾಕಷ್ಟು ಜನ ಸೇರಿದ್ದರು.
ಕಣ್ಣೀರಿಡುತ್ತಿದ್ದ ಪತ್ನಿಯ ಕಣ್ಣೊರೆಸಿ ಮುತ್ತಿಕ್ಕಿದ ಅಲ್ಲು ಅರ್ಜುನ್ ಇನ್ನೇನು ಕಾರಿನಲ್ಲಿ ಕೂರಬೇಕು ಎಂದಾಗ ತಂದೆ ಅಲ್ಲು ಅರವಿಂದ್ ತಾವೇ ಕಾರಿನಲ್ಲಿ ಕೂತರು. ಆಗ ಅವರೆಲ್ಲರನ್ನೂ ಸಮಾಧಾನ ಮಾಡಿ ಏನೂ ಆಗಲ್ಲ ಎಂದು ಧೈರ್ಯ ಹೇಳಿ ಹಿಂದೆ ಕಳುಹಿಸಿಕೊಟ್ಟ ಅರ್ಜುನ್ ಪೊಲೀಸರ ಜೊತೆ ತೆರಳಿದ್ದಾರೆ.
ಕಾರಿನ ಹಿಂದೆಯೇ ಅವರ ಆಪ್ತರೂ ಓಡಿ ಹೋಗಿದ್ದಾರೆ. ಮೊನ್ನೆಯಷ್ಟೇ ಪುಷ್ಪ 2 ರಿಲೀಸ್ ವೇಳೆ ಸಂಧ್ಯಾ ಥಿಯೇಟರ್ ಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದಾಗ ಉಂಟಾಗಿದ್ದ ನೂಕು ನುಗ್ಗಲಿನಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದಳು. ಪ್ರಕರಣ ಸಂಬಂಧ ಅಲ್ಲು ವಿರುದ್ಧ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದರೂ ಅಲ್ಲು ಹಾಜರಾಗದ ಕಾರಣ ಪೊಲೀಸರು ಇಂದು ಅವರನ್ನು ಬಂಧಿಸಿದ್ದಾರೆ.