ಅಲ್ಲು ರಾಮಲಿಂಗಯ್ಯ ಜನ್ಮದಿನಾಚರಣೆಯ ಅಂಗವಾಗಿ ಅಲ್ಲು ಸ್ಟುಡಿಯೋ ಉದ್ಘಾಟಿಸಿದ ಅಲ್ಲು ಅರ್ಜುನ್ ಕುಟುಂಬ

ಶನಿವಾರ, 3 ಅಕ್ಟೋಬರ್ 2020 (11:41 IST)
ಹೈದರಾಬಾದ್ : ತೆಲುಗಿನ ಖ್ಯಾತ ನಟ ಅಲ್ಲು ರಾಮಲಿಂಗಯ್ಯ  ಅವರ 99ನೇ ಜನ್ಮದಿನಾಚರಣೆಯ ಅಂಗವಾಗಿ ಅಲ್ಲು ಸ್ಟುಡಿಯೋ ಉದ್ಘಾಟನೆ ಮಾಡಲಾಗಿದೆ.

ಅಕ್ಟೋಬರ್ 1 ರಂದು  ನಟ ಅಲ್ಲು ರಾಮಲಿಂಗಯ್ಯ  ಅವರ 99ನೇ ಜನ್ಮದಿನಾಚರಣೆ ನಡೆದಿದ್ದು, ಆ ದಿನ ನಟ ಅಲ್ಲು ಅರ್ಜುನ್ ಕುಟುಂಬದವರು  ಹೈದರಾಬಾದಿನಲ್ಲಿ ಈ ಸ್ಟುಡಿಯೋವನ್ನು ಉದ್ಘಾಟನೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ಅಲ್ಲು ಅರವಿಂದ್, ನಟ ಅಲ್ಲು ಅರ್ಜುನ್, ಅಲ್ಲು ಸಿರೀಶ್, ಅಲ್ಲು ಬಾಬಿ ಭಾಗಿವಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಮಾಹಿತಿ ಪ್ರಕಾರ ಇದು ಅತಿ ದೊಡ್ಡ ಫಿಲಂ ಸ್ಟುಡಿಯೋ ಎಂಬ ಹೆಗ್ಗಳಿಕೆ ಪಡೆದಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ