53 ನೇ ವಯಸ್ಸಿನಲ್ಲಿ ಡಿಗ್ರಿ ಪ್ರವೇಶ ಪರೀಕ್ಷೆ ಬರೆದ ತೆಲುಗು ನಟಿ

ಗುರುವಾರ, 1 ಅಕ್ಟೋಬರ್ 2020 (10:27 IST)
ಹೈದರಾಬಾದ್ : ತಮ್ಮ 53 ನೇ ವಯಸ್ಸಿನಲ್ಲಿ ತೆಲುಗು ನಟಿಯೊಬ್ಬರು ಡಿಗ್ರಿ ಪ್ರವೇಶ ಪರೀಕ್ಷೆ ಬರೆದು ಸೈ ಎನಿಸಿಕೊಂಡಿದ್ದಾರೆ.

ತೆಲುಗಿನ ಖ್ಯಾತ ಪೋಷಕ ನಟಿ ಹೇಮಾ ಅವರು ಡಾ.ಬಿಆರ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪಡೆಯಲು ಮುಂದಾಗಿದ್ದಾರೆ. ಆದಕಾರಣ ಕಳೆದ ಭಾನುವಾರ ನೆಲ್ಲಗೊಂಡು ಜಿಲ್ಲೆಯ ಎನ್ ಜಿ ಕಲಾಶಾಲೆಯಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ