ಆದಿಪುರುಷದಲ್ಲಿ ಸೀತೆ ಪಾತ್ರ ಅನುಷ್ಕಾ ಮಾಡುತ್ತಾರಾ? ಈ ಬಗ್ಗೆ ಅನುಷ್ಕಾ ಪ್ರತಿಕ್ರಿಯೆ ಏನು?

ಶುಕ್ರವಾರ, 2 ಅಕ್ಟೋಬರ್ 2020 (11:47 IST)
ಹೈದರಾಬಾದ್ :  ನಟ ಪ್ರಭಾಸ್ ಅವರು ಆದಿಪುರುಷ ಚಿತ್ರದಲ್ಲಿ ರಾಮ ಪಾತ್ರದಲ್ಲಿ ನಟಿಸುತ್ತಿರುವ  ಬಗ್ಗೆ ಎಲ್ಲರಿಗೂ ತಿಳಿದೆ ಇದೆ. ಆದರೆ ಈ ಚಿತ್ರದಲ್ಲಿ ಸೀತೆ ಪಾತ್ರದಲ್ಲಿ ಪ್ರಭಾಸ್ ಗೆಳತಿ ನಟಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಹೌದು. ಆದಿಪುರುಷ ಒಂದು ಪೌರಾಣಿಕ ಚಿತ್ರವಾಗಿದ್ದು, ಇದು ಬಹುಕೋಟಿ ಬಜೆಜ್ ಚಿತ್ರವಾಗಿದೆ. ಇದರಲ್ಲಿ ನಟ ಪ್ರಭಾಸ್ ರಾಮನ ಪಾತ್ರ ಮಾಡಲಿದ್ದಾರೆ. ಆದರೆ ಸೀತೆ ಪಾತ್ರಕ್ಕೆ ನಟಿಯರ ಆಯ್ಕೆ ನಡೆಯುತ್ತಿದ್ದು, ಇದೀಗ ಅದರಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಆದರೆ ಇದಕ್ಕೆ ಆನ್ ಲೈನ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ನಟಿ ಅನುಷ್ಕಾ ಆದಿಪುರುಷ ಸಿನಿಮಾದಲ್ಲಿ ತಾವು ಸೀತೆಯ ಪಾತ್ರ ನಿರ್ವಹಿಸುತ್ತೇನೆ ಎಂಬುದು ಸುಳ್ಳು ಸುದ್ದಿ. ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಹೇಳುವುದರ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ