ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಲು ಹಾಲಿವುಡ್ ಏಜೆಂಟ್ ಗಳ ಸಹಾಯ ಪಡೆಯಲಿರುವ ಅಲ್ಲು ಅರ್ಜುನ್

ಬುಧವಾರ, 13 ಸೆಪ್ಟಂಬರ್ 2023 (08:50 IST)
Photo Courtesy: Twitter
ಹೈದರಾಬಾದ್: ಸೌತ್ ಸಿನಿಮಾ ಸ್ಟಾರ್ ಗಳು ಈಗ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಯಶಸ್ಸು ಸಿಕ್ಕ ಮೇಲೆ, ಗ್ಲೋಬಲ್ ಸ್ಟಾರ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.

ರಾಮ್ ಚರಣ್, ಅಲ್ಲು ಅರ್ಜುನ್, ಜ್ಯೂ.ಎನ್ ಟಿಆರ್ ಸೇರಿದಂತೆ ಘಟಾನುಘಟಿ ಸೌತ್ ಸ್ಟಾರ್ ಗಳ ಗುರಿ ಈಗ ಹಾಲಿವುಡ್ ನಲ್ಲೂ ತಮ್ಮನ್ನು ಗುರುತಿಸಿಕೊಳ್ಳುವುದು.

ಪುಷ್ಪ ಸಿನಿಮಾ ಬಳಿಕ ಮಾರ್ಕೆಟ್ ವಿಸ್ತರಿಸಿಕೊಂಡಿರುವ ನಟ ಅಲ್ಲು ಅರ್ಜುನ್ ಈಗ ಗ್ಲೋಬಲ್ ಸ್ಟಾರ್ ಆಗಿ ಗುರುತಿಸಿಕೊಳ್ಳಲು ಹಾಲಿವುಡ್ ಏಜೆಂಟ್ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ. ಈಗಾಗಲೇ ಬಾಲಿವುಡ್ ನ ರಣವೀರ್ ಸಿಂಗ್, ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ ಹಾಲಿವುಡ್ ಏಜೆನ್ಸಿ ಜೊತೆ ಕೈ ಜೋಡಿಸಿ ವಿದೇಶದಲ್ಲೂ ತಮ್ಮ ಮಾರ್ಕೆಟ್ ವಿಸ್ತರಿಸಿಕೊಳ್ಳಲು ಹೊರಟಿದ್ದಾರೆ. ಈಗ ಅಲ್ಲು ಅರ್ಜುನ್ ಕೂಡಾ ತಮಗೂ ಹಾಲಿವುಡ್ ನಲ್ಲಿ ಮಾರ್ಕೆಟ್ ವಿಸ್ತರಿಸುವ ಬಯಕೆಯಿರುವುದಾಗಿ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದರು. ರಾಜಮೌಳಿ ಪ್ರೇರಣೆಯಿಂದ ತಾವೂ ಹಾಲಿವುಡ್ ಏಜೆನ್ಸಿ ಜೊತೆ ಕೈ ಜೋಡಿಸಲು ತಯಾರಿ ನಡೆಸಿರುವುದಾಗಿ ಹೇಳಿದ್ದಾರೆ. ಇಷ್ಟು ದಿನ ಪ್ಯಾನ್ ಇಂಡಿಯಾ ಎನ್ನುತ್ತಿದ್ದ ಸೌತ್ ಸ್ಟಾರ್ ಗಳು ಈಗ ಗ್ಲೋಬಲ್ ಸ್ಟಾರ್ ಪಟ್ಟಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ