ಅಣ್ಣನ ಸಮಾಧಿ ಬಳಿಯೇ ಪತ್ನಿಯ ಸೀಮಂತ ಕಾರ್ಯಕ್ರಮ ಮಾಡಿದ ಧ್ರುವ ಸರ್ಜಾ

ಸೋಮವಾರ, 11 ಸೆಪ್ಟಂಬರ್ 2023 (19:50 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ವಿಶೇಷ ಸ್ಥಳದಲ್ಲಿ ಮಾಡಿದ್ದಾರೆ.

ಪತ್ನಿ ಪ್ರೇರಣಾ ಸೀಮಂತ ಶಾಸ್ತ್ರವನ್ನು ಧ್ರುವ ತಮ್ಮ ತೋಟದ ಮನೆಯಲ್ಲಿ ಅಣ್ಣ ಚಿರು ಸಮಾಧಿಯ ಪಕ್ಕದಲ್ಲಿ ವಿಶೇಷ ಮಂಟಪದಲ್ಲಿ ನೆರವೇರಿಸಿದ್ದಾರೆ. ಇತ್ತೀಚೆಗಷ್ಟೇ ಅಣ್ಣನ ಸಮಾಧಿ ಪಕ್ಕ ಧ್ರುವ ಮಲಗಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೆ ಅಣ್ಣನ ಮೇಲಿನ ಪ್ರೀತಿಯನ್ನು ಈ ರೀತಿ ತೋರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಧ್ರುವ ಸರ್ಜಾ ಮತ್ತು ಪ್ರೇರಣಾ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸ್ವತಃ ಧ್ರುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ