ಅಲ್ಲು ಅರ್ಜುನ್ ‘ಪುಷ್ಪಾ’ ಚಿತ್ರದಲ್ಲಿ ಖಳನಾಯಕ ಯಾರು ಗೊತ್ತೇ?

ಸೋಮವಾರ, 25 ಜನವರಿ 2021 (06:36 IST)
ಹೈದರಾಬಾದ್ : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬೊಲೊ ನಿರ್ದೇಶನದ ಮುಂಬರುವ ಚಿತ್ರ ‘ಪುಷ್ಪಾ’ ಚಿತ್ರದ ಚಿತ್ರೀಕರಣ ಪೂರ್ವ ಗೋದಾವರಿ ಜಿಲ್ಲೆಯ ಮಾರೆಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದೆ.

ಕಳ್ಳಸಾಗಣೆಯ ಹಿನ್ನಲೆಯಲ್ಲಿ ನಡೆಯುವ ಈ ಚಿತ್ರದಲ್ಲಿ ಒಂದಲ್ಲ ಎರಡಲ್ಲ ಸುಮಾರು ಎಂಟು ಖಳನಾಯಕರು ಇದ್ದಾರೆ. ಹಾಗಾಗಿ ನಿರ್ದೇಶಕ ಸುಕುಮಾರ್ ಹಲವಾರು ನಾಯಕರನ್ನು ಆಯ್ಕೆ ಮಾಡುತ್ತಿದ್ದಾರೆ. ಆದರೆ ಅದರಲ್ಲಿ ಮುಖ್ಯ ಖಳನಾಯಕನ ಪಾತ್ರಕ್ಕಾಗಿ ನಟನನ್ನು ಆರಿಸಲಾಗುತ್ತಿದೆ.

ಇದರಲ್ಲಿ  ವಿಜಯ್ ಸೇತುಪತಿ ಅವರ ಹೆಸರು ಕೇಳಿಬಂದಿದ್ದು,  ಆದರೆ ವಿಜಯ್ ಸೇತುಪತಿ ಡೇಟ್ಸ್ ಸರಿಹೊಂದದ ಹಿನ್ನಲೆಯಲ್ಲಿ ಬಾಬಿ ಸಿನ್ಹಾ, ಆರ್ಯ ಹೆಸರು ಕೇಳಿಬಂದಿತ್ತು. ಆದರೆ ಇತ್ತೀಚೆಗೆ ಬಾಲಿವುಡ್ ನಟ ಬಾಬಿ ಡಿಯೋಲ್ ಹೆಸರು ಹರಿದಾಡುತ್ತಿದೆ. ಹಾಗಾಗಿ ಯಾರನ್ನ ಅಂತಿಮಗೊಳಿಸಬೇಕೆಂಬ ನಿರ್ಧಾರವನ್ನು ನಿರ್ದೇಶಕರು ಮಾಡಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ