‘ಪ್ರಶಸ್ತಿ ವಾಪಸ್ ಮಾಡಲು ನಾನೇನು ಮೂರ್ಖನೇ?’

ಮಂಗಳವಾರ, 3 ಅಕ್ಟೋಬರ್ 2017 (10:33 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಮೌನವಾಗಿರುವ ಪ್ರಧಾನಿ ಮೋದಿ ಐದು ರಾಷ್ಟ್ರಪ್ರಶಸ್ತಿ ಪಡೆದ ನನಗಿಂತ ದೊಡ್ಡ ನಟ ಎಂದು ವ್ಯಂಗ್ಯವಾಡಿದ್ದ ಪ್ರಕಾಶ್ ರೈ ಪ್ರತಿಭಟನೆ ನಡೆಸಲು ಪ್ರಶಸ್ತಿ ವಾಪಸ್ ಮಾಡುವುದಾಗಿ ನಾನು ಹೇಳಿಲ್ಲ ಎಂದಿದ್ದಾರೆ.


ಪ್ರಶಸ್ತಿ ವಾಪಸ್ ಮಾಡಲು ನಾನೇನು ಮೂರ್ಖನೇ? ಅದನ್ನು ನಾನು ಮಾಡಿದ ಕೆಲಸ ಗುರುತಿಸಿ ಕೊಟ್ಟ ಗೌರವ. ಅದನ್ನು ವಾಪಸ್ ಮಾಡುವ ಮೂರ್ಖತನ ಮಾಡಲ್ಲ’ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಪ್ರಧಾನಿ ಮೋದಿ ನನಗಿಂತ ದೊಡ್ಡ ನಟ ಎಂದು ಹೇಳಿರುವ ಹೇಳಿಕೆಯನ್ನು ತಪ್ಪಾಗಿ ನಾನು ಪ್ರಶಸ್ತಿ ವಾಪಸ್ ಮಾಡುತ್ತೇನೆಂದು ಅರ್ಥೈಸಿಕೊಳ್ಳಲಾಗಿದೆ ಎಂದು ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ