ಡಿ ಬಾಸ್ ದರ್ಶನ್ ‘ರಾಬರ್ಟ್’ ಸಿನಿಮಾದಲ್ಲಿ ಅಂಬಿ-ವಿಷ್ಣು ಜೋಡಿಯ ಕುಚಿಕು ಸಾಂಗ್

ಬುಧವಾರ, 11 ಡಿಸೆಂಬರ್ 2019 (09:11 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಕನ್ನಡ ಸಿನಿಮಾದಲ್ಲಿ ಇಂದಿಗೂ ಗೋಲ್ಡನ್ ಸಾಂಗ್ ಎಂದೇ ಗುರುತಿಸಿಕೊಂಡಿರುವ ಕುಚಿಕು ಹಾಡು ಕೇಳಿಬರಲಿದೆ.


ಸಾಹಸಸಿಂಹ ವಿಷ್ಣುವರ್ಧನ್‍ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಜತೆಯಾಗಿ ನಟಿಸಿದ್ದ ಎವರ್  ಗ್ರೀನ್ ಸಿನಿಮಾ ‘ದಿಗ್ಗಜರು’. ಈ ಸಿನಿಮಾದಲ್ಲಿ ಬರುವ ‘ಕುಚಿಕು ಕುಚಿಕು’ ಹಾಡು ಇಂದಿಗೂ ಸ್ನೇಹಿತರಿಗೆ ಆಂಥಮ್ ಸಾಂಗ್ ಇದ್ದಂತೆ.

ಆ ಹಾಡನ್ನು ಇದೀಗ ರಾಬರ್ಟ್ ಸಿನಿಮಾದಲ್ಲಿ ರಿಮಿಕ್ಸ್ ಮಾಡಿ ಅಳವಡಿಸಲಾಗುತ್ತಿದ್ದು, ದರ್ಶನ್ ಜತೆಗೆ ವಿನೋದ್ ಪ್ರಭಾಕರ್ ಹಾಡಿಗೆ ಹೆಜ್ಜೆ ಹಾಕಲಿದ್ದಾರಂತೆ. ಈ ಹಾಡು ಅಂದು ಮಾಡಿದ ಮೋಡಿಯನ್ನೇ ಮತ್ತೆ ಮಾಡುತ್ತಾ ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ