ವಿಂಡೀಸ್ ಕ್ರಿಕೆಟಿಗ ಡ್ವಾನ್ ಬ್ರಾವೋ ಕೈಯಿಂದ ರಾಕಿಂಗ್ ಸ್ಟಾರ್ ಯಶ್ ಪಡೆದ ಅವಾರ್ಡ್ ಯಾವುದು ಗೊತ್ತಾ?

ಮಂಗಳವಾರ, 10 ಡಿಸೆಂಬರ್ 2019 (09:33 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಮೂಲಕ ಈಗ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಚೆನ್ನೈನಲ್ಲಿ ನಡೆದ ಬಿಹೈಂಡ್ ವುಡ್ ಗೋಲ್ಡನ್ ಮೆಡಲ್ ಕಾರ್ಯಕ್ರಮದಲ್ಲಿ ಸೆನ್ಸೇಷನ್ ಆಫ್ ಸೌತ್ ಇಂಡಿಯಾ ಸಿನಿಮಾ ಅವಾರ್ಡ್ ನ್ನು ಯಶ್ ಗೆದ್ದುಕೊಂಡಿದ್ದಾರೆ.


ಕೆಜಿಎಫ್ ಸಿನಿಮಾದಲ್ಲಿ ಮಾಡಿದ ಮೋಡಿಗೆ ಯಶ್ ಗೆ ಈ ಪ್ರಶಸ್ತಿ ಸಿಕ್ಕಿದೆ. ವಿಂಡೀಸ್ ಕ್ರಿಕೆಟಿಗ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುವ ಡ್ವಾನ್ ಬ್ರಾವೋ ಈ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ ಯಶ್ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ