ಆಸ್ಪತ್ರೆಗೆ ದಾಖಲಾದ ಹೆಬ್ಬುಲಿ ಬೆಡಗಿ ಅಮಲಾ ಪೌಲ್

ಗುರುವಾರ, 16 ಆಗಸ್ಟ್ 2018 (07:03 IST)
ಬೆಂಗಳೂರು : ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ ನಟಿ ಅಮಲಾ ಪೌಲ್ ಅವರು ಚಿತ್ರವೊಂದರ ಶೂಟಿಂಗ್ ನಲ್ಲಿ ಸ್ಟಂಟ್ ಮಾಡುವ ಸಂದರ್ಭದಲ್ಲಿ ತಮ್ಮ ಬಲಗೈಯನ್ನು ಏಟುಮಾಡಿಕೊಂಡಿದ್ದಾರೆ.


'ಅಧೋ ಅಂಧ ಪರವೈ ಪೊಲಾ' ನಟಿ ಅಮಲಾ ಪೌಲ್  ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ಕಳೆದ ಶನಿವಾರ ರಾತ್ರಿ ಸ್ಟಂಟ್ ಸನ್ನಿವೇಶಗಳಲ್ಲಿ ನಟಿ ಅಮಲಾ ಪೌಲ್ ಪಾಲ್ಗೊಂಡಿದ್ದರು. ಆಗ ಸ್ಟಂಟ್ ಮಾಡುವ ಸಂದರ್ಭದಲ್ಲಿ ನಟಿ ಅಮಲಾ ಬಲಗೈ ಮುರಿದಿದೆ.


ಅಮಲಾ ಪೌಲ್ ಅವರಿಗೆ ಪೆಟ್ಟಾಗಾದ ಬಲಗೈ ಉಳುಕಿರಬೇಕು ಎಂದು ಚಿತ್ರತಂಡ ಭಾವಿಸಿತ್ತು. ಆದ್ದರಿಂದ ಅವರಿಗೆ ಕೂಡಲೇ ಐಸ್ ಪ್ಯಾಕ್ ನೀಡಲಾಗಿತ್ತು. ನಂತರ ಶೂಟಿಂಗ್ ನಿಲ್ಲಿಸುವುದು ಬೇಡ ಎಂದು ಅಮಲಾ ಪೌಲ್ ಅಂದಿನ ರಾತ್ರಿ ಚಿತ್ರೀಕರಣವನ್ನು ಮುಂದುವರಿಸಿದ್ದರು. ಆದರೆ ಸ್ವಲ್ಪ ಸಮಯ ಕಳೆದಂತೆ ಅಮಲಾ ಪೌಲ್ ಗೆ ಕೈನೋವು ಜಾಸ್ತಿ ಆಗಿದೆ.


ನೋವು ಹೆಚ್ಚಾದ ಪರಿಣಾಮ ತಕ್ಷಣ ಶೂಟಿಂಗ್ ನಿಲ್ಲಿಸಿ ಚಿಕಿತ್ಸೆಗಾಗಿ ಕೊಚ್ಚಿಗೆ ತೆರಳಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ಕೈ ಮುರಿದಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಅಮಲಾ ಪೌಲ್ ಕೊಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವನ್ನು  ಅಮಲಾ ಪೌಲ್ ಅವರು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ