ಹೊಸ ಪ್ರೀತಿ ಸಿಕ್ಕ ಖುಷಿಯಲ್ಲಿ ನಟಿ ಅಂಕಿತಾ ಲೋಖಂಡೆ

ಶನಿವಾರ, 25 ಜೂನ್ 2016 (09:50 IST)
ಸುಶಾಂತ್ ಸಿಂಗ್ ರಜಪೂತ್ ಹಾಗೂ ಅಂಕಿತಾ ಲೋಖಂಡೆ. ಕಿರುತೆರೆಯಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದ್ದ ಜೋಡಿ. ಪವಿತ್ರ ರಿಷ್ತಾ ಅನ್ನೋ ಸೀರಿಯಲ್ ಮೂಲಕ ಪರಿಚಯವಾದ ಈ ಜೋಡಿ ನಿಜ ಬದುಕಿನಲ್ಲೂ ಮುಂದೆ ಪ್ರೇಮಿಗಳಾದ್ರು.ಆದ್ರೆ ಕೆಲ ತಿಂಗಳ ಹಿಂದೆ ಇವರಿಬ್ಬರು ಪರಸ್ಪರ ದೂರವಾದ್ರು. ಸುಶಾಂತ್ ಸಿಂಗ್ ರಜಪೂತ್ ಅವರು ದೂರವಾಗುತ್ತಿದ್ದಂತೆ ಅಂಕಿತಾ ತುಂಬಾನೇ ನೊಂದುಕೊಂಡಿದ್ದರು ಅನ್ನೋ ಸುದ್ದಿಯನ್ನು ನಾವೆಲ್ಲಾ ಕೇಳಿದ್ದೆವು.ಆದ್ರೀಗ ಮತ್ತೆ ಖುಷಿಯಾಗಿದ್ದಾರಂತೆ.

ಹೌದು.. ಅಂಕಿತಾ ಅವರಿಂದ ಸುಶಾಂತ್ ಸಿಂಗ್ ರಜಪೂತ್ ದೂರವಾದ ಬಳಿಕ ಇದಕ್ಕೆಲ್ಲಾ ಕಾರಣ ಸುಶಾಂತ್ ಅವೇ ಅಂತಾ ದೂರಲಾಗಿತ್ತು. ಅಲ್ಲದೇ ಅಂಕಿತಾ ತುಂಬಾನೇ ನೊಂದು ಹೋಗಿದ್ದಾರೆ ಅಂತಾ ಎಲ್ಲಡೆ ಸುದ್ದಿಯಾಯ್ತು. ಆದ್ರೀಗ ಅಂಕಿತಾ ಸುಶಾಂತ್ ಹೋದ್ರೆ ಏನಾಯ್ತಂತೆ ಅಂತಾ ಹಸಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅಂದ್ಹಾಗೆ ಸದ್ಯ ಅಂಕಿತಾ ಅವರು ಕಿರುತೆರೆ ನಟ ಕುಶಾಲ್ ಟಂಡನ್ ಅವರೊಂದಿಗೆ ಡೇಟಿಂಗ್‌ನಲ್ಲಿ ತೊಡಗಿದ್ದಾರೆ ಅನ್ನೋ ಮಾತುಗಳು ಕೇಳ  ಬರುತ್ತಿವೆ.ಅಲ್ಲದೇ ಕುಶಾಲ್ ಅವರೇ ಅಂಕಿತಾ ಅವರೊಂದಿಗೆ ಇರುವ ಕೆಲವು ಖಾಸಗಿ ಫೋಟೋಗಳನ್ನು ಇನ್ಸ್ ಟ್ರಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.ಅಲ್ಲದೇ ವಿತ್ ಕ್ಯೂಟ್ ಹಾರ್ಟ್ ಅಂತಾ ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ.
 
ಅಂದ್ಹಾಗೆ ಅಂಕಿತಾ ಲೋಖಂಡೆ ಅವರ ಹೆಸರು ಕುಶಾಲ್ ಜೊತೆ ಥಳುಕು ಹಾಕಿಕೊಂಡಿದ್ರೆ ಅತ್ತ ಸುಶಾಂತ್ ಸಿಂಗ್ ಹಾಗೂ ನಟಿ ಕೃತಿ ಸನೋನ್ ಅವರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅನ್ನೋ ಮಾತುಗಳು ಜೋರಾಗಿದೆ. ಸುಶಾಂತ್ ಅವರು ಮೊದಲೇ ಕೃತಿ ಜೊತೆ ಕ್ಲೋಸ್ ಆಗಿದ್ದರು ಇದೇ ಕಾರಣಕ್ಕೆ ಅಂಕಿತಾ ಸುಶಾಂತ್ ಅವರಿಂದ  ದೂರವಾಗಿದ್ದರು ಅನ್ನಲಾಗುತ್ತಿದೆ. ಎಷ್ಟು ನಿಜ ಎಷ್ಟು ಸುಳ್ಳು ಅನ್ನೋ ಗೊತ್ತಿಲ್ಲ ಆದ್ರೆ ಇವರಿಬ್ಬರು ಈಗ ಬೇರೆ ಬೇರೆ ದಾರಿ ಹುಡುಕಿಕೊಂಡಿರೋದಂತೂ ನಿಜ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ