ಲಿಗರ್ ಚಿತ್ರದಲ್ಲಿ ನಟಿಸಲಿದ್ದಾರೆ ಮತ್ತೊಬ್ಬ ಬಾಲಿವುಡ್ ನಟಿ

ಬುಧವಾರ, 24 ಮಾರ್ಚ್ 2021 (10:51 IST)
ಹೈದರಾಬಾದ್ : ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ‘ಲಿಗರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಬಾಲಿವುಡ್ ನ ಮತ್ತೊಬ್ಬ ನಟಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.

ಹೌದು. ಬಾಲಿವುಡ್ ನಟಿ ಸಾರಾ ಅಲಿಖಾನ್ ‘ಲಿಗರ್’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇತ್ತೀಚೆಗೆ ನಿರ್ಮಾಪಕ ಕರಣ್ ಜೋಹರ್, ಪುರಿ ಜಗನ್ನಾಥ್ , ಚಾರ್ಮಿ ಕೌರ್, ಸಾರಾ ಅಲಿಖಾನ್ ಮುಂತಾದವರು ಪಾರ್ಟಿ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ಫೋಟೊವನ್ನು ನಿರ್ಮಾಪಕಿ ಚಾರ್ಮಿ ಕೌರ್ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಆ್ಯಕ್ಷನ್ ಮತ್ತು ಕ್ರೀಡಾ ಆಧಾರಿತ ತೆಲುಗು ಮತ್ತು ಹಿಂದಿ ಚಿತ್ರವಾದ ಲಿಗರ್ ನಲ್ಲಿ ಅನನ್ಯಾ ಪಾಂಡೆ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶಿಸುತ್ತಿದ್ದು, ಕರಣ್ ಜೋಹರ್ , ಚಾರ್ಮಿ ಕೌರ್ ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ