ಕನ್ನಡದ ಮತ್ತೊಂದು ಸಿನಿಮಾ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆ

ಶನಿವಾರ, 21 ನವೆಂಬರ್ 2020 (10:56 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಸಣ್ಣ ಬಜೆಟ್ ನ ಸಿನಿಮಾಗಳು ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಿ ನಷ್ಟವಾಗದಂತೆ ನೋಡಿಕೊಳ್ಳುವ ತಂತ್ರ ಮಾಡಿದೆ. ಇದೀಗ ಮತ್ತೊಂದು ಕನ್ನಡ ಸಿನಿಮಾ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗುತ್ತಿದೆ.


ಕರ್ವ, ದಿಯಾ ಮುಂತಾದ ಹೊಸ ಬಗೆಯ ಸಿನಿಮಾ ಮಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಚಿತ್ರತಂಡ ಥ್ರಿಲ್ಲರ್ ಕತೆಯನ್ನೊಳಗೊಂಡ ‘ಮನೆ ನಂ13’ ಎಂಬ ಸಿನಿಮಾ ಮಾಡಿದೆ. ಈ ಸಿನಿಮಾ ನವಂಬರ್ 26 ಕ್ಕೆ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಕೇವಲ ಕನ್ನಡ ಮಾತ್ರವಲ್ಲ, ತಮಿಳಿನಲ್ಲೂ ಇದು ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ