ರಜನಿ, ಕಮಲ್ ಹಾಸನ್ ರಂತೆಯೇ ರಾಜಕೀಯಕ್ಕೆ ಧುಮುಕಿದ ಮತ್ತೊಬ್ಬ ತಮಿಳು ನಟ

ಮಂಗಳವಾರ, 15 ಡಿಸೆಂಬರ್ 2020 (08:48 IST)
ಚೆನ್ನೈ : ನಟ ಕಮಲ್ ಹಾಸನ್  ಮತ್ತು ರಜನೀಕಾಂತ್ ತಮಿಳು ಚಿತ್ರರಂಗದ ಪ್ರಮುಖ ತಾರೆಯರು. ಪ್ರಸ್ತುತ ಇವರಿಬ್ಬರು ಪಕ್ಷ ಕಟ್ಟಿದ್ದು, ತಮಿಳುನಾಡು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ.

ಸದ್ಯ ರಜನೀಕಾಂತ್ ತಮ್ಮ ರಾಜಕೀಯ ಪಕ್ಷವನ್ನು ಡಿಸೆಂಬರ್ 31ರಂದು ಘೋಷಿಸಲು ಸಜ್ಜಾಗಿದ್ದಾರೆ. ಕಮಲ್ ಹಾಸನ್ ಈಗಾಗಲೇ ಚುನಾವಣೆಯಲ್ಲಿ ತಮ್ಮ ಪಕ್ಷ ಪರ ಪ್ರಚಾರ ಮಾಡಲು ಸಿದ್ಧರಾಗಿದ್ದಾರೆ. ಈ ನಡುವೆ ಇದೀಗ ಮತ್ತೊಬ್ಬ ತಮಿಳು ನಟ ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ತಮಿಳು ನಟ ವಿಶಾಲ್ ಅವರು  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಂತೆ. ಇದಕ್ಕಾಗಿ ಅವರು ತಮ್ಮ ಆಪ್ತ ವಲಯ ಮತ್ತು ಅವರ ಅಭಿಮಾನಿ ಬಳಗದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ