ಅಂತೂ ಇಂತೂ ತರುಣ್ ಸೋನಲ್‌ಗೆ ಹನಿಮೂನ್‌ಗೆ ಕಾಲ ಕೂಡಿಬಂತು

Sampriya

ಮಂಗಳವಾರ, 24 ಸೆಪ್ಟಂಬರ್ 2024 (18:35 IST)
Photo Courtesy X
ಕಳೆದ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಇದೀಗ ಹನಿಮೂನ್‌ಗೆ ವಿದೇಶಕ್ಕೆ ಹಾರಿದ್ದಾರೆ.

ನಟಿ ಸೋನಲ್ ಅವರು ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವಿಮಾನ ಲ್ಯಾಂಡ್‌ ಆಗುತ್ತಿರುವುದನ್ನು ಕಾಣಬಹುದು. ಇನ್ನೂ ತರುಣ್ ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ ಇಬ್ಬರು ಕೈ ಯಲ್ಲಿ ಕಾಫಿ, ಜ್ಯೂಸ್ ಹಿಡಿದಿರುವುದನ್ನು ಪೋಸ್ಟ್‌ ಮಾಡಿದ್ದಾರೆ.

ಈಚೆಗೆ ನೀಡಿದ  ಸಂದರ್ಶನವೊಂದರಲ್ಲಿ ಹನಿಮೂನ್‌ಗಾಗಿ ತರುಣ್ ಕಾತುರರಾಗಿರುವುದಾಗಿ ಹೇಳಿಕೊಂಡಿದ್ದರು. ಯಾವ ಸ್ಥಳಕ್ಕೆ ಹೋಗಬೇಕೆಂದು ಹವಾಮಾನ ವರದಿ ಹಾಗೂ ಬಜೆಟ್ ಮೇಲೆ ನಿಂತಿದೆ. ಸೋನಲ್‌ಗೆ ಮಾಲ್ಡೀವ್ಸ್‌ಗೆ ಹೋಗಬೇಕೆಂಬ ಆಸೆಯಿದೆ ಎಂದು ಹೇಳಿದ್ದರು.

ಅದಲ್ಲದೆ ಈಚೆಗೆ ಸೋನಲ್ ಅವರು ಕಾರ್ಯಕ್ರಮದಿಂದ ವಾಪಾಸ್ಸಾಗುತ್ತಿದ್ದಾಗ ಮಾಧ್ಯಮದವರು, ಹನಿಮೂನ್‌ಗೆ ಎಲ್ಲಿ ಪ್ಲ್ಯಾನ್ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ನಾಚಿ ನೀರಾಗಿದ್ದಾರೆ.  ಇದೀಗ ಕೊನೆಗೂ ಈ ಜೋಡಿ ಹನಿಮೂನ್‌ಗಾಗಿ ವಿದೇಶ ಪ್ರಯಾಣ ಬೆಳೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ