ದರ್ಶನ್‌ ಒಂಟಿತನ ನಿವಾರಣೆಗೆ ತರುಣ್ ಸುಧೀರ್ ಕೊಟ್ಟ ಟಾನಿಕ್ ಏನ್‌ ಗೊತ್ತಾ

Sampriya

ಶುಕ್ರವಾರ, 19 ಜುಲೈ 2024 (18:40 IST)
Photo Courtesy X
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಅವರನ್ನು ನಿರ್ದೇಶಕ ತರುಣ್ ಸುಧೀರ್, ನಟ ಯಶಸ್ ಸೂರ್ಯ ಹಾಗೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಭೇಟಿಯಾದರು. ಇನ್ನೂ ದರ್ಶನ್ ಅವರ ಜತೆ ಇವರು ಕೆಲಹೊತ್ತು ಮಾತುಕತೆ ನಡೆಸಿದರು. ಇನ್ನೂ ಜೈಲಿನ ವಾತಾವರಣಕ್ಕೆ ಹೊಂದಲು ಕಷ್ಟಪಡುತ್ತಿರುವ ದರ್ಶನ್‌ಗೆ ತರುಣ್ ಸುಧೀರ್ ಅವರು ಎರಡು ಪುಸಕ್ತಗಳನ್ನು ನೀಡಿದ್ದಾರೆ.

ಕೊಲೆ ಪ್ರಕರಣದಿಂದ ಜೈಲು ಸೇರಿರುವ ನಟ ದರ್ಶನ್ ಅವರು ಮಾನಸೀಕವಾಗಿ ಕುಗ್ಗಿರುವುದಾಗಿ ಹೇಳಲಾಗಿದೆ. ಅದಲ್ಲದೆ ಜೈಲಿನ ಊಟಕ್ಕೆ ಸೆಟ್ ಆಗದೆ ದರ್ಶನ್ ತೂಕ ಕಳೆದುಕೊಂಡಿದ್ದಾರೆ. ಇನ್ನೂ ಕಳೆದ ಒಂದು ತಿಂಗಳಿಂದ ನಾಲ್ಕು ಗೋಡೆಗಳ ಮಧ್ಯೆಯೇ ಕಾಲ ಕಳೆಯುತ್ತಿರುವ ದರ್ಶನ್ ಅವರು ಮನಸ್ಸಿಗೆ ಬದಲಾವಣೆ ಸಿಗಲೆಂದು ತರುಣ್ ಅವರು ಪುಸ್ತಕ ನೀಡಿದ್ದಾರೆ.

'ದಿ ಅಲ್‌ಕೆಮಿಸ್ಟ್' ಕನ್ನಡ ಅನುವಾದ ಪುಸ್ತಕ ಹಾಗೂ ದರ್ಶನ್ ಅವರ ನೆಚ್ಚಿನ ಅಂಬಾರಿ ಹೊತ್ತ ಅರ್ಜುನನ ಕುರಿತಾದ ಪುಸ್ತಕವನ್ನು ದರ್ಶನ್‌ಗೆ ಕೊಟ್ಟಿ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

ದರ್ಶನ್ ಭೇಟಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ತರುಣ್ ಅವರು, "ಅಲ್‌ಕೆಮಿಸ್ಟ್ ಕನ್ನಡ ವರ್ಷನ್ ಬುಕ್ ಹಾಗೂ ಅರ್ಜುನ ಆನೆ ಬಗ್ಗೆ ಒಂದು ಪುಸ್ತಕ ಬಂದಿದೆ. ಅರ್ಜುನ ಅಂತ ಈ ಎರಡು ಪುಸ್ತಕ ಕೊಟ್ಟಿದ್ದೇನೆ. ಅಲ್‌ಕೆಮಿಸ್ಟ್ ಒಂದು ಲೈಫ್ ಜರ್ನಿ ಬಗ್ಗೆ ಪುಸ್ತಕವಿದೆ. ಅದರಲ್ಲೊಂದು ಫಿಲಾಸಫಿ ಇದೆ. ಒಳಗಡೆ ಲೈಫ್ ಬಗ್ಗೆ ಚಿಕ್ಕದೊಂದು ಪ್ರೇರಣೆ ಬರುತ್ತೆ. ಅಂದರೆ, ಯಾವುದೇ ಸಂದರ್ಭದಲ್ಲೂ ಅದರಲ್ಲಿ ಏನು ಪಾಸಿಟಿವ್ ಅನ್ನು ನೋಡಬಹುದು ಅನ್ನೋದು ಆ ಪುಸ್ತಕದಲ್ಲಿದೆ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ