ಆರ್ ಜಿವಿ ‘ಡಿ ಕಂಪೆನಿ’ ಚಿತ್ರ ಐಟಂ ಸಾಂಗ್ ನಲ್ಲಿ ಕುಣಿಯಲಿದ್ದಾಳೆ ಅಪ್ಸರಾ ರಾಣಿ

ಬುಧವಾರ, 24 ಫೆಬ್ರವರಿ 2021 (13:07 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಭೂಗತ ದೊರೆ ದಾವೊದ್ ಇಬ್ರಾಹಿಂ ಸಂಘಟನೆಯ ಕುರಿತಾದ ನೈಜ ಘಟನೆಯನ್ನು ಚಿತ್ರ ಮಾಡಲು ಹೊರಟಿದ್ದಾರೆ.  ಇದಕ್ಕೆ ‘ಡಿ ಕಂಪೆನಿ’ ಎಂದು ಹೆಸರಿಡಲಾಗಿದೆ.

ಇದೀಗ ರಾಮ್ ಗೋಪಾಲ್ ವರ್ಮಾ ಅವರು ಈ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯಲು ಅಪ್ಸರಾ ರಾಣಿಗೆ ಅವಕಾಶ ನೀಡಿದ್ದಾರಂತೆ. ಈ ಸುದ್ದಿಯನ್ನು ಸ್ವತಃ ಆರ್ ಜಿವಿ ಅವರೇ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಅಪ್ಸರಾ ಇತ್ತೀಚೆಗೆ ರವಿ ತೇಜ ಅವರ ಕ್ರ್ಯಾಕ್ ಚಿತ್ರದ ಸಾಂಗ್ ನಲ್ಲಿ ಕುಣಿದು ಕಮಾಲ್ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ