ಹೈದರಾಬಾದ್ : ಪ್ರೀತಿಯ ವಿಷಯ ಕೇಳಿದಾಗ ಹೆಚ್ಚಿನ ನಟಿಯರು ಸಕರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಆದರೆ ನಟಿ ನಿಕೇಶ ಪಟೇಲ್ ಪ್ರೀತಿ ಎಂದರೆ ಸಂಪೂರ್ಣ ಸಮಯ ವ್ಯರ್ಥ ಮಾಡುವ ಕೆಲಸ ಎಂದಿದ್ದಾರೆ.
ನಟಿ ನಿಕೇಶ ಪಟೇಲ್, ನನ್ನ ದೃಷ್ಟಿಯಲ್ಲಿ ಪ್ರೀತಿ ಮತ್ತು ಸಂಬಂಧದಲ್ಲಿರುವುದು ವ್ಯರ್ಥ. ಈ ಸಂಬಂಧಗಳು ನಿರಸವಾಗಿದೆ ಎಂದು ಹೇಳಿದ್ದಾರೆ. ನಟಿಯ ಈ ಮಾತನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಗಿದೆ. ನಟಿ ಪ್ರೀತಿಯ ಬಗ್ಗೆ ದ್ವೇಷದ ಭಾವನೆ ಹೊಂದಲು ಕಾರಣವೇನು ಎಂಬ ಕುತೂಹಲ ಹಲವರಲ್ಲಿದೆ ಎನ್ನಲಾಗಿದೆ.