ಗಾಳಿಪಟ 2 ಸಿನಿಮಾದ ಮತ್ತೊಂದು ರೊಮ್ಯಾಂಟಿಕ್ ಹಾಡು ಇಂದು ರಿಲೀಸ್

ಶನಿವಾರ, 23 ಜುಲೈ 2022 (08:50 IST)
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾದ ಮತ್ತೊಂದು ರೊಮ್ಯಾಂಟಿಕ್ ಹಾಡು ಇಂದು ರಿಲೀಸ್ ಆಗುತ್ತಿದೆ.

ಈಗಾಗಲೇ ಮೂರು ಹಾಡುಗಳು ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿವೆ. ಇದೀಗ ನಾಲ್ಕನೇ ಹಾಡು ಬಿಡುಗಡೆಯಾಗುತ್ತಿದೆ. ನೀನು ಬಗೆಹರಿಯದ ಹಾಡು ಎಂಬ ರೊಮ್ಯಾಂಟಿಕ್ ಹಾಡಿನ ಲಿರಿಕಲ್ ವಿಡಿಯೋ ಇಂದು ಸಂಜೆ 5.05 ಕ್ಕೆ ಬಿಡುಗಡೆಯಾಗಲಿದೆ.

ಗಾಳಿಪಟ 2 ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ