ವಿಡಿಯೋ ಲೀಕ್ ಮಾಡದಂತೆ ಎಚ್ಚರಿಕೆ ಕೊಟ್ಟ ನಟಿ ಆಶಿಕಾ ರಂಗನಾಥ್
ಸೋಮವಾರ, 5 ಅಕ್ಟೋಬರ್ 2020 (11:35 IST)
ಬೆಂಗಳೂರು: ಮದಗಜ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದ್ದು, ಈ ಕುರಿತ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ.
ಆದರೆ ಕೆಲವರು ಚಿತ್ರೀಕರಣದ ದೃಶ್ಯಗಳನ್ನೂ ಲೀಕ್ ಮಾಡುತ್ತಿರುವ ಬಗ್ಗೆ ನಾಯಕಿ ಆಶಿಕಾ ರಂಗನಾಥ್ ಮನವಿ ಮಾಡಿದ್ದಾರೆ. ‘ಸಾಮಾಜಿಕ ಜಾಲತಾಣಗಳಲ್ಲಿ ಮದಗಜ ಸಿನಿಮಾದ ದೃಶ್ಯಗಳನ್ನು, ವಿಡಿಯೋಗಳನ್ನು ಲೀಕ್ ಮಾಡುತ್ತಿರುವುದನ್ನು ಗಮನಿಸಿದ್ದೇವೆ. ದಯವಿಟ್ಟು ಇಂತಹ ವಿಡಿಯೋ, ಫೋಟೋ ಕಂಡರೆ ರಿಪೋರ್ಟ್ ಮಾಡಿ, ಯಾರೂ ಶೇರ್ ಮಾಡಬೇಡಿ’ ಎಂದು ಆಶಿಕಾ ಕೇಳಿಕೊಂಡಿದ್ದಾರೆ.